ಭಾರತಕ್ಕೆ ವಾಪಸಾಗಿ ನೆರವು ನೀಡಲು ಸಿದ್ಧ : ರಘರಾಮ್ ರಾಜನ್

Update: 2020-04-11 07:43 GMT

ಹೊಸದಿಲ್ಲಿ, ಎ.11: ಕೋವಿಡ್ -19 ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಆರ್ಥಿಕ ಒತ್ತಡವನ್ನು ಎದುರಿಸಲು ಭಾರತ ನೆರವು ಕೋರಿದರೆ ತಾನು ಸಹಾಯ ಮಾಡಲು ಸಿದ್ಧರಿರುವುದಾಗಿ ಭಾರತದ ರಿಸರ್ವ್ ಬ್ಯಾಂಕ್ (ಆರ್‌ಬಿಐ)   ಮಾಜಿ ಗವರ್ನರ್ ರಘುರಾಮ್ ರಾಜನ್ ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ದೇಶದಲ್ಲಿ ಲಾಕ್ ಡೌನ್ ಆಗಿರುವುದರಿಂದ, ಈಗಾಗಲೇ ಬ್ಯಾಂಕಿಂಗ್ ಮತ್ತು ವಿಮಾನಯಾನದಂತಹ ಒತ್ತಡದಲ್ಲಿರುವ ಹಲವಾರು ಕ್ಷೇತ್ರಗಳು ಮತ್ತೆ  ತೀವ್ರ ಒತ್ತಡವನ್ನು ಎದುರಿಸುತ್ತಿವೆ.

ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ವ್ಯವಹಾರಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ.

ಸಾಂಕ್ರಾಮಿಕ ರೋಗ ಹರಡುವಿಕೆಯಿಂದಾಗಿ  ಸಂಕಷ್ಟದಲ್ಲಿರುವ  ಭಾರತ ಒಂದು ವೇಳೆ  ಆರ್ಥಿಕ ವಿಷಯಗಳ ಬಗ್ಗೆ ಸಹಾಯ ಕೇಳಿದರೆ ಭಾರತಕ್ಕೆ  ನೀವು ಹಿಂದಿರುಗಬಹುದೇ ಎಂದು ಅಮೆರಿಕದಲ್ಲಿರುವ  ರಾಜನ್  ಅವರಲ್ಲಿ ಎನ್ ಡಿ ಟಿವಿ ಕೇಳಿದಾಗ   ಖಂಡಿತ ವಾಪಸಾಗಿ ಭಾರತಕ್ಕೆ ಸಹಾಯ ಮಾಡುವೆ   ಎಂದು ಹೇಳಿದರು.

"ವೈರಸ್ ಇಟಲಿ ಮತ್ತು ಅಮೆರಿಕದಲ್ಲಿ  ಹರಡಿದಂತೆ ಭಾರತದಲ್ಲಿ ಹರಡುವುದಿದ್ದರೆ ನಾವು ಅದನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಈ ದೇಶಗಳಲ್ಲಿ ಸಾರ್ವಜನಿಕ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಅನೇಕ ಆಸ್ಪತ್ರೆಗಳಲ್ಲಿ ಹೊರೆ ಮತ್ತು  ಸಾವುಗಳ ಏರುತ್ತಿರುವಾಗ ಆರ್ಥಿಕ ಚಟುವಟಿಕೆಯನ್ನು ಮುಂದುವರಿಸುವುದು ಕಷ್ಟ, "ಎಂದು ರಾಜನ್ ಹೇಳಿದರು.

ಆರ್ ಬಿಐ  ಮಾಜಿ  ಗವರ್ನರ್ ಅವರು  ಪ್ರಪಂಚವು ಆಳವಾದ ಆರ್ಥಿಕ ಹಿಂಜರಿತದಲ್ಲಿದೆ" ಎಂದು ಹೇಳಿದರು. " ಮುಂದಿನ ವರ್ಷ  ಆರ್ಥಿಕ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವುದನ್ನು  ನೋಡುತ್ತಿದ್ದೇವೆ,  ಆದರೆ  ಇದು ಕೊರೋನ ವೈರಸ್ ಹರಡುವುದನ್ನು ನಿಯಂತ್ರಿಸಲು  ನಾವು ತೆಗೆದುಕೊಳ್ಳುವ ಕ್ರಮಗಳ ಮೇಲೆ ಅವಲಂಬಿತವಾಗಿರುತ್ತದೆ" ಎಂದು ಅವರು ಎನ್ ಡಿ ಟಿವಿಗೆ ನೀಡಿರುವ  ಸಂದರ್ಶನದಲ್ಲಿ  ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News