ಶಿಕ್ಷಣ ಸಂಸ್ಥೆಗಳಿಂದ ಆನ್‌ಲೈನ್ ಬೋಧನೆ ಮುಂದುವರಿಕೆ:ಕೇಂದ್ರ ಸರಕಾರ

Update: 2020-04-15 13:17 GMT

ಹೊಸದಿಲ್ಲಿ,ಎ.15: ಕೊರೋನ ವೈರಸ್ ಸೋಂಕು ಹರಡುವಿಕೆ ಯನ್ನು ತಡೆಯಲು ಹೇರಲಾಗಿರುವ ಲಾಕ್‌ಡೌನ್ ಅವಧಿಯಲ್ಲಿ ಯಾವೆಲ್ಲ ಕ್ಷೇತ್ರಗಳು ಮತ್ತು ಉದ್ಯಮಗಳು ಕಾರ್ಯ ನಿರ್ವಹಣೆಯನ್ನು ಮಂದುವರಿಸಬಹುದು ಎಂಬ ಬಗ್ಗೆ ಕೇಂದ್ರ ಗೃಹ ಸಚಿವಾಲಯವು ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿದೆ.

 ಎಲ್ಲ ಶಿಕ್ಷಣ,ತರಬೇತಿ ಮತ್ತು ಕೋಚಿಂಗ್ ಸಂಸ್ಥೆಗಳು ಮುಚ್ಚಿರಲಿವೆ. ಆದರೆ ಲಾಕ್‌ಡೌನ್ ಅವಧಿಯಲ್ಲಿ ಈ ಸಂಸ್ಥೆಗಳು ಆನ್‌ಲೈನ್ ಬೋಧನೆಯ ಮೂಲಕ ಶೈಕ್ಷಣಿಕ ವೇಳಾಪಟ್ಟಿಯನ್ನು ಪಾಲಿಸಲಿವೆ ಎಂದು ನಿರೀಕ್ಷಿಸಲಾಗಿದೆ.

ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಕಡಿಮೆ ಮಾಡಲು ಆಯ್ದ ಹೆಚ್ಚುವರಿ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದ್ದು,ಎಪ್ರಿಲ್ 20ರಿಂದ ಇದು ಅನ್ವಯವಾಗಲಿದೆ. ಹಾಲಿ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆಯ ಆಧಾರದಲ್ಲಿ ಈ ಸೀಮಿತ ವಿನಾಯತಿಗಳನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು/ಜಿಲ್ಲಾಡಳಿತಗಳು ಅನುಷ್ಠಾನಿಸಲಿವೆ ಎಂದು ಗೃಹ ಸಚಿವಾಲಯವು ತನ್ನ ನಿರ್ದೇಶಗಳಲ್ಲಿ ತಿಳಿಸಿದೆ.

ಬೋಧನಾ ಉದ್ದೇಶಕ್ಕಾಗಿ ದೂರದರ್ಶನ ಮತ್ತು ಇತರ ಶೈಕ್ಷಣಿಕ ವಾಹಿನಿಗಳ ಗರಿಷ್ಠ ಬಳಕೆಯನ್ನು ಮಾಡಿಕೊಳ್ಳಬಹುದು ಎಂದೂ ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News