ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಸಾಧ್ಯವಿಲ್ಲ: ಕೇರಳ ಹೈಕೋರ್ಟ್ ಗೆ ತಿಳಿಸಿದ ಕೇಂದ್ರ

Update: 2020-04-17 16:17 GMT

ಹೊಸದಿಲ್ಲಿ: ಕೊರೋನ ವೈರಸ್ ಹಿನ್ನೆಲೆಯಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಸದ್ಯಕ್ಕೆ ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಗೆ ಕೇಂದ್ರ ಸರಕಾರವು ತಿಳಿಸಿದೆ.

ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿರುವ ಕೇರಳಿಗರನ್ನು ವಾಪಸ್ ಕರೆತರಲು ನಿರ್ದೇಶನ ನೀಡುವಂತೆ ಕೋರಿದ್ದ ಅರ್ಜಿಗಳ ವಿಚಾರಣೆಯನ್ನು ಜಸ್ಟಿಸ್ ರಾಜಾ ವಿಜಯರಾಘವನ್ ಮತ್ತು ಟಿ.ಆರ್. ರವಿಯವರ ವಿಭಾಗೀಯ ಪೀಠ ನಡೆಸಿತು.

ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವಲ್ಲಿ ಭಾರತ ಸರಕಾರವು ರಾಜ್ಯಗಳ ನಡುವೆ ಯಾವುದೇ ಭೇದಭಾವ ತೋರುವುದಿಲ್ಲ. ಕೋವಿಡ್ 19 ಪೀಡಿತ ದೇಶಗಳಿಂದ ಭಾರತೀಯರನ್ನು ಸದ್ಯ ವಾಪಸ್ ಕರೆಸಿಕೊಳ್ಳದಿರಲು ಕೇಂದ್ರವು ನಿರ್ಧರಿಸಿದೆ. ಕೊರೋನ ಹರಡುವುದನ್ನು ತಡೆಯಲು ಈ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ ಕೇಂದ್ರವು, ವಿದೇಶಗಳಲ್ಲಿರುವ ಎಲ್ಲಾ ಭಾರತೀಯರ ಸುರಕ್ಷತೆಯನ್ನು ಕಾಪಾಡಲು ರಾಯಭಾರ ಕಚೇರಿಗಳಿಗೆ ನಿರ್ದೇಶ ನೀಡಲಾಗಿದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News