#Islamophobia_in_India ಟ್ವಿಟರ್ ನಲ್ಲಿ ಟಾಪ್ ಟ್ರೆಂಡಿಂಗ್: ಕೆಲವೇ ಗಂಟೆಗಳಲ್ಲಿ 6.5ಲಕ್ಷಕ್ಕೂ ಹೆಚ್ಚು ಟ್ವೀಟ್ ಗಳು

Update: 2020-04-22 03:58 GMT

ಹೊಸದಿಲ್ಲಿ, ಎ. 22 : ಕೊರೊನ ಸೋಂಕಿನ ನೆಪದಲ್ಲಿ  ಭಾರತದಲ್ಲಿ ಮುಸ್ಲಿಮರ ವಿರುದ್ಧ ದ್ವೇಷವನ್ನು ವ್ಯಾಪಕವಾಗಿ ಹರಡಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ ಮಂಗಳವಾರ ಸಂಜೆ ಟ್ವಿಟರ್ ನಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನವೊಂದು ಭಾರೀ ಟ್ರೆಂಡಿಂಗ್ ಆಗಿದೆ.  ಇದರಿಂದಾಗಿ  #Islamophobia_in_India ಹ್ಯಾಷ್ ಟ್ಯಾಗ್ ಕೆಲವೇ ಗಂಟೆಗಳಲ್ಲಿ ಭಾರತದಲ್ಲಿ ನಂಬರ್ 1 ಟ್ವಿಟರ್ ಟ್ರೆಂಡಿಂಗ್ ವಿಷಯವಾಗಿದೆ.

ಮಧ್ಯರಾತ್ರಿಯಾಗುವಾಗ ಆರೂವರೆ ಲಕ್ಷಕ್ಕೂ ಹೆಚ್ಚು ಜನರು ಈ ಹ್ಯಾಷ್ ಟ್ಯಾಗ್ ನಲ್ಲಿ ಟ್ವೀಟ್ ಮಾಡಿರುವುದು ವಿಶೇಷ. ಕೊರೊನ ಹರಡುತ್ತಿದ್ದಾರೆ ಎಂದು ದೂರಿ ಭಾರತದಲ್ಲಿ ಮುಸ್ಲಿಮರ ವಿರುದ್ಧ ಬಲಪಂಥೀಯರು ಹಾಗು ಅವರ ಬೆಂಬಲಿತ ಮಾಧ್ಯಮಗಳಿಂದ ವ್ಯಾಪಕ ಅಪಪ್ರಚಾರ ಹಾಗು ದ್ವೇಷ ಹರಡುವ ಕೆಲಸ ನಡೆಯುತ್ತಿದೆ ಎಂದು ಈ ಟ್ವೀಟ್ ಗಳಲ್ಲಿ ಜನರು ಉದಾಹರಣೆ ಸಹಿತ ವಿವರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಷಯದ ಕುರಿತು ಟ್ವೀಟ್ ಮಾಡುವಾಗ ಬಹಳಷ್ಟು ಜನರು  ಜಾಗತಿಕ ನಾಯಕರನ್ನು ಟ್ಯಾಗ್ ಕೂಡ ಮಾಡಿದ್ದಾರೆ. 

ಇದೇ ಸಂದರ್ಭದಲ್ಲಿ ಮಂಗಳವಾರ ಬೆಳಗ್ಗೆ " ಭಾರತ ಮುಸ್ಲಿಮರ ಪಾಲಿಗೆ ಸ್ವರ್ಗದಂತೆ" ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ವಿರುದ್ಧವೂ ದೊಡ್ಡ ಸಂಖ್ಯೆಯ ಟ್ವಿಟರ್ ಬಳಕೆದಾರರು ಹರಿಹಾಯ್ದಿದ್ದಾರೆ. ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಶನ್ ಅವರು ದೇಶದಲ್ಲಿ ಇಸ್ಲಾಮೊಫೋಬಿಯಾದ ವಾತಾವರಣ ನಿರ್ಮಾಣದ ಕುರಿತು ಮಾಡಿದ್ದ ಟೀಕೆಗೆ ಪ್ರತಿಕ್ರಿಯಿಸಿ ನಕ್ವಿ  "ಭಾರತದಲ್ಲಿ ಮುಸ್ಲಿಮರ ಆರ್ಥಿಕ, ಸಾಮಾಜಿಕ ಹಾಗು ಧಾರ್ಮಿಕ ಹಕ್ಕುಗಳು ಸುರಕ್ಷಿತವಾಗಿವೆ " ಎಂದು ತಿರುಗೇಟು ನೀಡಿದ್ದರು.  

ನಕ್ವಿ ಅವರನ್ನು ಟ್ಯಾಗ್ ಮಾಡಿರುವ ಬಹಳಷ್ಟು ಜನರು ದೇಶದಲ್ಲಿ ಮುಸ್ಲಿಮರ ವಿರುದ್ಧ ನಡೆದ ಗುಂಪು ಹತ್ಯೆ ಸಹಿತ ಇತರ ಹಲವು ಹಿಂಸಾಚಾರ ಪ್ರಕರಣಗಳ ಉದಾಹರಣೆ ನೀಡಿ ಪ್ರಶ್ನಿಸಿದ್ದಾರೆ. ಇದೇ ಸಂದರ್ಭದಲ್ಲಿ  #RSSTerrorists ಎಂಬ ಹ್ಯಾಷ್ ಟ್ಯಾಗ್ ಟಾಪ್ 3ಕ್ಕೆ ಬಂದಿದ್ದು ಇನ್ನೊಂದು ವಿಶೇಷ.

  #Islamophobia_in_India ಹ್ಯಾಷ್ ಟ್ಯಾಗ್ ನಲ್ಲಿ ಬಂದ ಕೆಲವು ಟ್ವೀಟ್ ಗಳು ಇಲ್ಲಿವೆ : 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News