ಒಂದು ವರ್ಷದ ಮಗುವಿನ ಹುಟ್ಟುಹಬ್ಬ ಆಚರಿಸಿದ ಹೈದರಾಬಾದ್ ಪೊಲೀಸರು

Update: 2020-04-29 04:55 GMT
ಒಂದು ವರ್ಷದ ಮಗುವಿನ ಹುಟ್ಟುಹಬ್ಬ ಆಚರಿಸಿದ ಹೈದರಾಬಾದ್ ಪೊಲೀಸರು
  • whatsapp icon

ಹೈದರಾಬಾದ್, ಎ.29: ಮೈರಾ ಹೆಸರಿನ ಮಗುವಿನ ಮೊದಲ ವರ್ಷದ ಹುಟ್ಟುಹಬ್ಬ ಅತ್ಯಂತ ವಿಭಿನ್ನ ಹಾಗೂ ವಿಶೇಷವಾಗಿ ಆಚರಿಸಲ್ಪಟ್ಟಿದ್ದು, ಈ ಮಗುವಿನ ತಂದೆ-ತಾಯಿಯ ಅನುಪಸ್ಥಿತಿಯಲ್ಲಿ ಹೈದರಾಬಾದ್ ಪೊಲೀಸರು ಮಗುವಿನ ಹುಟ್ಟುಹಬ್ಬ ಆಚರಿಸಿದರು. ಈ ಮಗುವಿನ ತಂದೆ-ತಾಯಿ ಅಮೆರಿಕದಲ್ಲಿ ನೆಲೆಸಿದ್ದಾರೆ.

ಈಗ ನಡೆಯುತ್ತಿರುವ ಲಾಕ್‌ಡೌನ್‌ನಿಂದಾಗಿ ಮೈರಾ ತನ್ನ ಅಜ್ಜ-ಅಜ್ಜಿಯ ಜೊತೆ ಹೈದರಾಬಾದ್‌ನಲ್ಲಿ ನೆಲೆಸಿದ್ದು,ತನ್ನ ಹೆತ್ತವರಾದ ಸಂದೀಪ್ ಹಾಗೂ ಹರಿಣಿ ನೆಲೆಸಿರುವ ಅಮೆರಿಕದ ಬೋಸ್ಟನ್‌ಗೆ ಹೋಗದೇ ಭಾರತದಲ್ಲಿ ಉಳಿದುಕೊಂಡಿದೆ. ತಮ್ಮ ಮಗುವಿನ ಮೊದಲ ವರ್ಷದ ಹುಟ್ಟುಹಬ್ಬವನ್ನು ನೀವೇ ಆಚರಿಸಬೇಕೆಂದು ಸಂದೀಪ್ ಹಾಗೂ ಹರಿಣಿ ದಂಪತಿ ಹೈದರಾಬಾದ್ ಪೊಲೀಸರಲ್ಲಿ ವಿನಂತಿಸಿಕೊಂಡಿದ್ದರು.

ಹೈದರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಇತರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಬರ್ಕಾತ್‌ಪುರ ಪ್ರದೇಶದಲ್ಲಿರುವ ಸಂದೀಪ್ ಹಾಗೂ ಹರಿಣಿಯವರ ಮನೆಗೆ ಭೇಟಿ ನೀಡಿ ಒಂದು ವರ್ಷದ ಹೆಣ್ಣುಮಗುವಿನ ಹುಟ್ಟುಹಬ್ಬಕ್ಕೆ ಶುಭಾಶಯ ಹಾರೈಸಿದರು.ಮುಖಕ್ಕೆ ಮಾಸ್ಕ್ ‌ಧರಿಸಿರುವ ಗೊಂಬೆಯನ್ನು ಪೊಲೀಸರು ಮಗುವಿಗೆ ಉಡುಗೊರೆಯಾಗಿ ನೀಡಿದರು.

ಮಗುವಿನ ಹೆತ್ತವರು ಇಂದು ಫೋನ್ ಮಾಡಿ ಮೈರಾಳ ಮೊದಲ ಹುಟ್ಟುಹಬ್ಬದ ಕುರಿತು ಮಾಹಿತಿ ನೀಡಿದರು. ಹೆತ್ತವರಿಗೆ ತಮ್ಮ ಮಗುವಿನ ಮೊದಲ ವರ್ಷದ ಹುಟ್ಟುಹಬ್ಬ ಹೆಚ್ಚು ಪ್ರಮುಖ ಹಾಗೂ ಭಾವನಾತ್ಮಕವಾಗಿರುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಅವರಿಗೆ ಒಟ್ಟಿಗಿರಲು ಸಾಧ್ಯವಾಗಿಲ್ಲ. ಹೈದರಾಬಾದ್ ನಗರ ಪೊಲೀಸರ ವತಿಯಿಂದ ಹುಟ್ಟುಹಬ್ಬ ಆಚರಿಸಲು ನಾನು ಯೋಚಿಸಿದ್ದೆ ಎಂದು ಕುಮಾರ್ ಹೇಳಿದ್ದಾರೆ.

  ಮಗುವಿನ ಹೆತ್ತವರು ಕಳೆದ ತಿಂಗಳು ಹೈದರಾಬಾದ್‌ಗೆ ಬಂದಿದ್ದರು. ಬಳಿಕ ಅವರು ಮಗುವನ್ನು ಬಿಟ್ಟು ಬೋಸ್ಟನ್‌ಗೆ ವಾಪಸಾಗಿದ್ದರು. ಮಗುವಿನ ಅಜ್ಜ ಮಾ.20ರಂದು ಅಮೆರಿಕಕ್ಕೆ ಮಗುವಿನೊಂದಿಗೆ ತೆರಳಬೇಕಾಗಿತ್ತು. ಅಮೆರಿಕಕ್ಕೆ ತೆರಳುವ ಮೊದಲು  ಮಗುವಿನ ಅಜ್ಜ ಆರೋಗ್ಯ ತಪಾಸಣೆಗೆ ಒಳಗಾಗಿದ್ದರು. ಮಗುವಿನ ಅಜ್ಜನಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದರು. ಹೀಗಾಗಿ ಅವರು ಅಮೆರಿಕಕ್ಕೆ ತೆರಳಿಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News