ಅಸ್ಸಾಂ | ‘ರ‍್ಯಾಟ್‌ ಹೋಲ್’ ಗಣಿಗೆ ನೀರು, 18 ಕಾರ್ಮಿಕರು ಸಿಕ್ಕಿಕೊಂಡಿರುವ ಭೀತಿ

Update: 2025-01-06 16:59 GMT

PC : NDTV 

ಗುವಾಹಟಿ : ಅಸ್ಸಾಮಿನ ‘ರ‍್ಯಾಟ್‌ ಹೋಲ್’ ಗಣಿಯೊಂದಕ್ಕೆ ಸೋಮವಾರ ನೀರು ನುಗ್ಗಿದ್ದು ಸುಮಾರು 18 ಕಾರ್ಮಿಕರು ಒಳಗೆ ಸಿಕ್ಕಿಹಾಕಿಕೊಂಡಿರುವ ಭೀತಿ ವ್ಯಕ್ತವಾಗಿದೆ. 300 ಅಡಿ ಆಳದ ಈ ಕಲ್ಲಿದ್ದಲು ಗಣಿ ದಿಮಾ ಹಸಾವೊ ಜಿಲ್ಲೆಯ ಉಮ್ರಾಂಗ್ಸೊದಲ್ಲಿದೆ.

ಅಕ್ರಮ ಗಣಿಯೊಳಗೆ ಸುಮಾರು 100 ಅಡಿ ಎತ್ತರಕ್ಕೆ ನೀರು ತುಂಬಿಕೊಂಡಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಧಾವಿಸಿರುವ ಪೋಲಿಸ್ ಮತ್ತು ರಕ್ಷಣಾ ತಂಡಗಳು ಎರಡು ಮೋಟರ್ ಪಂಪ್ಗಳನ್ನು ಬಳಸಿ ಗಣಿಯಲ್ಲಿ ತುಂಬಿರುವ ನೀರನ್ನು ಹೊರಹಾಕುತ್ತಿದ್ದಾರೆ.

ಮೇಘಾಲಯ ಗಡಿಗೆ ಸಮೀಪದ ಘಟನಾ ಸ್ಥಳಕ್ಕೆ ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ತಂಡಗಳನ್ನು ರವಾನಿಸಲಾಗಿದೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವಾಗುವಂತೆ ಸರಕಾರವು ಸೇನೆಯನ್ನು ಕೋರಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News