“ಪ್ರಧಾನಿ ಕಚೇರಿಯ ಐವರಿಗೆ ಅನಾರೋಗ್ಯ”

Update: 2020-05-06 18:37 GMT

ಹೊಸದಿಲ್ಲಿ: ಆರೋಗ್ಯ ಸೇತು ಆ್ಯಪ್ ನಲ್ಲಿ ಲೋಪಗಳಿವೆ ಎಂದು ಆರೋಪಿಸಿದ್ದ ಫ್ರೆಂಚ್ ಹ್ಯಾಕರ್ ಇಲಿಯಟ್ ಆಲ್ಡರ್ಸನ್ ಆ್ಯಪ್ ಕುರಿತ ಇನ್ನಷ್ಟು ಲೋಪಗಳನ್ನು ಬಹಿರಂಗಪಡಿಸುವುದಾಗಿ ಹೇಳಿದ್ದಾರೆ.

ಆ್ಯಪ್ ನಿಂದ ಪಡೆದುಕೊಂಡಂತಹ ಮಾಹಿತಿಯೊಂದು ತಾನು ಹಂಚಿಕೊಳ್ಳುವುದಾಗಿ ಅವರು ಹೇಳಿದ್ದಾರೆ. ಇದೇ ಸಂದರ್ಭ ಅವರು ಪ್ರಧಾನಿ ಕಚೇರಿಯಲ್ಲಿ 5 ಮಂದಿ ಅನಾರೋಗ್ಯಕ್ಕೀಡಾಗಿದ್ದಾರೆ ಎಂದೂ ಆರೋಪಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಆ್ಯಂಡರ್ಸನ್ “ನಿನ್ನೆ ಪ್ರಧಾನಿ ಕಚೇರಿಯಲ್ಲಿ 8 ಮಂದಿ ಅನಾರೋಗ್ಯಕ್ಕೀಡಾಗಿದ್ದಾರೆ. 2 ಭಾರತೀಯ ಸೇನೆಯ ಮುಖ್ಯ ಕಚೇರಿಯಲ್ಲಿ ಅನಾರೋಗ್ಯಕ್ಕೀಡಾಗಿದ್ದಾರೆ. ಭಾರತೀಯ ಸಂಸತ್ ನಲ್ಲಿ ಒಬ್ಬರು ಸೋಂಕಿಗೊಳಗಾಗಿದ್ದಾರೆ. ಗೃಹ ಕಚೇರಿಯ ಮೂವರು ಸೋಂಕಿಗೊಳಗಾಗಿದ್ದಾರೆ” ಎಂದು ಆರೋಪಿಸಿದ್ದಾರೆ.

ಆರೋಗ್ಯ ಸೇತು ಆ್ಯಪ್ ನಲ್ಲಿ ಹಲವು ತಾಂತ್ರಿಕ, ಭದ್ರತಾ ಲೋಪಗಳಿವೆ ಎಂದು ಮಂಗಳವಾರ ಆರೋಪಿಸಿದ್ದರು. ಆದರೆ ಈ ಆರೋಪಗಳನ್ನು ಸರಕಾರ ನಿರಾಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News