ದೇಶಾದ್ಯಂತ 483 ಜಿಲ್ಲೆಗಳಲ್ಲಿ 7743 ಕೋವಿಡ್-19 ಕೇಂದ್ರಗಳು: ಆರೋಗ್ಯ ಸಚಿವಾಲಯ

Update: 2020-05-10 17:18 GMT

ಹೊಸದಿಲ್ಲಿ, ಮೇ 10: ದೇಶಾದ್ಯಂತ 483 ಜಿಲ್ಲೆಗಳಲ್ಲಿ ಒಟ್ಟು 7740 ಕೋವಿಡ್-19 ಚಿಕಿತ್ಸಾ, ತಪಾಸಣೆ ಸೌಕರ್ಯಗಳನ್ನು ಗುರುತಿಸಲಾಗಿದ್ದು, ಈ ಮಾರಕ ಸೋಂಕು ರೋಗದ ವಿರುದ್ಧ ಹೋರಾಡಲು ಅವು ಸಮರ್ಥವಾಗಿವೆಯೆಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ಕೋವಿಡ್-19 ಸೌಕರ್ಯಗಳನ್ನು ಡೆಡಿಕೇಟೆಡ್ ಕೋವಿಡ್ ಹಾಸ್ಪಿಟಲ್ (ಡಿಸಿಎಚ್), ಡೆಡಿಕೇಟೆಡ್ ಕೋವಿಡ್ ಕೋವಿಡ್ ಹೆಲ್ತ್ ಸೆಂಟರ್ (ಡಿಸಿಎಚ್‌ಸಿ) ಹಾಗೂ ಡೆಡಿಕೇಟೆಡ್ ಕೋವಿಡ್ ಕೇರ್ ಸೆಂಟರ್ (ಡಿಸಿಸಿಸಿ) ಎಂಬುದಾಗಿ ಮೂರು ಶ್ರೇಣಿಗಳಾಗಿ ವಿಂಗಡಿಸಲಾಗಿದೆ.

656769 ಐಸೊಲೇಶನ್ ಹಾಸಿಗೆಗಳು, ಕೊರೋನ ಸೋಂಕು ದೃಢಪಟ್ಟ ಪ್ರಕರಣಗಳಿಗಾಗಿ 3,05,567 ಹಾಸಿಗೆಗಳು, ಶಂಕಿತ ಪ್ರಕರಣಗಳಲ್ಲಿ 3,51,204 ಪ್ರಕರಣಗಳು, 99,492 ಆಮ್ಲಜನಕ ಪೂರೈಕೆ ವ್ಯವಸ್ಥೆಯಿರುವ ಹಾಸಿಗೆಗಳು, ಆಮ್ಲಜನಕದ ವ್ಯವಸ್ಥೆಯಿರುವ ಹಲವಾರು ಆಸ್ಪತ್ರೆಗಳು ಹಾಗೂ 34,076 ಐಸಿಯು ಹಾಸಿಗೆಗಳನ್ನು ವ್ಯವಸ್ಥೆಗೊಳಿಸಲಾಗಿದೆ ಎಂದು ಆರೋಗ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.

ಸಾರ್ವಜನಿಕರ ಮಾಹಿತಿಗಾಗಿ ಈ ಮೂರು ಶ್ರೇಣಿಯ ಕೋವಿಡ್ ಸೌಕರ್ಯಗಳ ಕುರಿತ ವಿವರಗಳನ್ನು ತಮ್ಮ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡಬೇಕೆಂದು ಕೇಂದ್ರ ಸರಕಾರವು ಎಲ್ಲಾ 32 ರಾಜ್ಯ ಹಾಗೂ ಕೇಂದ್ರಾಡಳಿತಗಳಿಗೆ ಸೂಚನೆ ನೀಡಿದೆ.

ಹತ್ತು ರಾಜ್ಯಗಳಲ್ಲಿ ಹೊಸ ಪ್ರಕರಣಗಳಿಲ್ಲ: ಹರ್ಷವರ್ಧನ್

ಕಳೆದ 24 ತಾಸುಗಳಲ್ಲಿ ದೇಶದಾದ್ಯಂತ ಒಟ್ಟು ಹತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೋನ ವೈರಸ್ ಸೋಂಕಿನ ಯಾವುದೇ ಹೊಸ ಪ್ರಕರಣ ವರದಿಯಾಗಿಲ್ಲವೆಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News