ಆರ್‌ಬಿಐ ಬಾಂಡ್ ಇನ್ನು ಲಭ್ಯವಿಲ್ಲ
ಹೊಸದಿಲ್ಲಿ,ಮೇ28: ಬಡ್ಡಿದರದಲ್ಲಿ ಕುಸಿತ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿಕೆಯೊಂದನ್ನು ನೀಡಿ, ಇನ್ನು ಮುಂದೆ 7.75 ಶೇಕಡಾ ಉಳಿತಾಯ (ಟ್ಯಾಕ್ಸೇಬಲ್) ಬಾಂಡ್‌ಗಳು ಲಭ್ಯವಿರುವುದಿಲ್ಲವೆಂದು ತಿಳಿಸಿದೆ.
ಆರ್‌ಬಿಐ ಬಾಂಡ್‌ಗಳು ಅಥವಾ ಭಾರತ ಸರಕಾರದ ಬಾಂಡ್‌ಗಳೆಂದು ಸಾಮಾನ್ಯವಾಗಿ ಕರೆಯಲ್ಪಡುವ ಈ ಬಾಂಡ್‌ಗಳು ಅಪಾಯರಹಿತ ಹೂಡಿಕೆಗೆ ಒಲವು ಹೊಂದಿರುವ ರಿಟೇಲ್ ಹೂಡಿಕೆದಾರರಲ್ಲಿ ಜನಪ್ರಿಯವಾಗಿವೆ.
7.75 ಶೇಕಡ ಉಳಿತಾಯ (ಟ್ಯಾಕ್ಸೇಬಲ್) ಬಾಂಡ್‌ಗಳು, 2018ರ ಚಂದಾದಾರತ್ವವನ್ನು 2020ರ ಮೇ 28, ಗುರುವಾರದಿಂದ ಬ್ಯಾಂಕ್ ವ್ಯವಹಾರದಿಂದ ರದ್ದುಪಡಿಸಲಾಗಿದೆ ಎಂದು’’ ಆರ್‌ಬಿಐ ಬುಧವಾರ ಪ್ರಕಟಿಸಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
100 ರೂ. ಬೆಲೆಯ, ಕನಿಷ್ಠ 1 ಸಾವಿರ ರೂ. ಮೊತ್ತದ ಕನಿಷ್ಠ ಚಂದಾದಾರತ್ವದೊಂದಿಗೆ ಈ ಬಾಂಡ್‌ಗಳನ್ನು ನೀಡಲಾಗುತ್ತಿತ್ತು. ಏಳು ವರ್ಷಗಳ ಅವಧಿಯ ಈ ಬಾಂಡ್‌ಗಳು ಇಶ್ಯೂ ಮಾಡಲಾದ ದಿನಾಂಕದಿಂದ ಮರುಪಾವತಿಗೆ ಯೋಗ್ಯವಾಗಿರುತ್ತವೆ ಎಂದರು.
7.75 ಶೇ. ಉಳಿತಾಯ (ಟ್ಯಾಕ್ಸೇಬಲ್) ಬಾಂಡಯೋಜನೆಯನ್ನು ಸ್ಥಗಿತಗೊಳಿಸಿರುವುದಕ್ಕೆ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಾಂಡ್‌ಗಳಲ್ಲಿ ಉಳಿತಾಯ ಹೂಡಿಕೆ ಮಾಡುವಂತವರಿಗೆ, ಅದರಲ್ಲೂ ವಿಶೇಷವಾಗಿ ಹಿರಿಯ ನಾಗರಿಕರಿಗೆ ಸರಕಾರವು ದೊಡ್ಡ ಹೊಡೆತವನ್ನು ನೀಡಿದೆ’’ ಎಂದವರು ಟ್ವೀಟ್ ಮಾಡಿದ್ದಾರೆ.