ಸ್ಮಾರ್ಟ್‌ಫೋನ್ ಖರೀದಿಸದ ಪತಿ: ಬೆಂಕಿ ಹಚ್ಚಿಕೊಂಡು ಪತ್ನಿ ಆತ್ಮಹತ್ಯೆ
Update: 2020-05-29 17:45 GMT
ಹೊಸದಿಲ್ಲಿ, ಮೇ 29: ತಮ್ಮ ಮಕ್ಕಳು ಕಲಿಯುತ್ತಿರುವ ಶಾಲೆಯು ನಡೆಸುತ್ತಿರುವ ಆನ್‌ಲೈನ್ ತರಗತಿಗಾಗಿ ಸ್ಮಾರ್ಟ್‌ಫೋನ್ ಖರೀದಿಸಲು ಪತಿಯ ನಿರಾಕರಣೆಯಿಂದ ನೊಂದ ಪತ್ನಿ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಿಲ್ಲಿಯ ಮೈದಾನ್ ಗಢಿ ಪ್ರದೇಶದಲ್ಲಿ ನಡೆದಿದೆ.
ಜ್ಯೋತಿ (29) ಮೃತ ಮಹಿಳೆ. ಮೇ 28ರಂದು ಬೆಳಿಗ್ಗೆ ಈ ಘಟನೆ ನಡೆದಿದ್ದು,ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಆಕೆಯನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ಸಾಗಿಸಿದ್ದರಾದರೂ ಶೇ.90ರಷ್ಟು ಸುಟ್ಟಗಾಯಗಳಾಗಿದ್ದ ಆಕೆ ಬದುಕುಳಿಯಲಿಲ್ಲ. ದಂಪತಿ ಏಳು ವರ್ಷಗಳ ಹಿಂದೆ ಮದುವೆಯಾಗಿದ್ದು,ಇಬ್ಬರು ಮಕ್ಕಳಿದ್ದಾರೆ.
ತನ್ನ ಪತ್ನಿ ಸ್ಮಾರ್ಟ್‌ಫೋನ್‌ಗಾಗಿ ಒತ್ತಾಯಿಸುತ್ತಿದ್ದಳು,ಆದರೆ ಲಾಕ್‌ಡೌನ್ ಮುಗಿದ ಬಳಿಕ ಖರೀದಿಸುವುದಾಗಿ ತಾನು ತಿಳಿಸಿದ್ದೆ ಎಂದು ಜ್ಯೋತಿಯ ಪತಿ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾನೆ.