ಆನೆ ಹತ್ಯೆ ಪ್ರಕರಣದಲ್ಲಿ ದ್ವೇಷ ಹರಡಿದ ಆರೋಪ: ಮೇನಕಾ ಗಾಂಧಿ ವಿರುದ್ಧ ದೂರು ನೀಡಿದ ಮಲಪ್ಪುರಂ ವಕೀಲ

Update: 2020-06-05 09:48 GMT

ಮಲಪ್ಪುರಂ: ಪಾಲಕ್ಕಾಡ್‍ ನಲ್ಲಿ ಇತ್ತೀಚೆಗೆ ಸ್ಫೋಟಕ ತುಂಬಿದ ಅನಾನಸ್ ತಿಂದು ಗರ್ಭಿಣಿ ಆನೆಯೊಂದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಪ್ಪುರಂ ಜಿಲ್ಲೆ ಹಾಗೂ ಅದರ ಜನತೆಯ ವಿರುದ್ಧ ದ್ವೇಷದ ಹರಡುವುದರಲ್ಲಿ ಬಿಜೆಪಿ ನಾಯಕಿ ಮೇನಕಾ ಗಾಂಧಿ ಮತ್ತಿತರರು ತೊಡಗಿದ್ದಾರೆಂದು ಆರೋಪಿಸಿ ಕೇರಳದ ಮಲಪ್ಪುರಂನ ವಕೀಲ ಸುಭಾಶ್ ಚಂದ್ರನ್ ಎಂಬವರು ಅಲ್ಲಿನ ಎಸ್‍ಪಿಗೆ ದೂರು ಸಲ್ಲಿಸಿದ್ದಾರೆ. ಮಾಜಿ ಕೇಂದ್ರ ಸಚಿವೆಯೂ ಆಗಿರುವ ಮೇನಕಾ ಮತ್ತಿತರರ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಅವರು ಕೋರಿದ್ದಾರೆ.

ಜಿಲ್ಲೆಯ ವಿರುದ್ಧ ನಡೆಸಲಾಗುತ್ತಿರುವ ದ್ವೇಷದ ಅಭಿಯಾನ ದುರುದ್ದೇಶಪೂರಿತವಾಗಿದೆ ಎಂದೂ ಅವರು ಆರೋಪಿಸಿದ್ದಾರೆ. ಪಾಲಕ್ಕಾಡ್ ಜಿಲ್ಲೆಯ ಮನ್ನರ್‍ಕ್ಕಡ್ ಎಂಬಲ್ಲಿ ಆ ದುರ್ಘಟನೆ ನಡೆದಿತ್ತಾದರೂ ಕೆಲವರು ಇದಕ್ಕೆ ಮತೀಯ ಬಣ್ಣ ನೀಡಿ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಮಲಪ್ಪುರಂ ವಿರುದ್ಧ ದ್ವೇಷದ ಭಾವನೆ ಮೂಡುವಂತೆ ಮಾಡಿದ್ದಾರೆಂದೂ ದೂರುದಾರರು ಆರೋಪಿಸಿದ್ದಾರೆ.

ರಾಜಕೀಯ ವಿಶ್ಲೇಷಕ ತಾರೇಕ್ ಫತಾಹ್ ವಿರುದ್ಧವೂ ದೂರುದಾರ ವಕೀಲ ದ್ವೇಷದ ಅಭಿಯಾನ ನಡೆಸಿದ ಆರೋಪ ಹೊರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News