ಜಾರಿ ನಿರ್ದೇಶನಾಲಯದ 6 ಅಧಿಕಾರಿಗಳಿಗೆ ಕೊರೋನ: ಕಚೇರಿ ಸೀಲ್ ಡೌನ್

Update: 2020-06-06 07:17 GMT

ಹೊಸದಿಲ್ಲಿ: ಜಾರಿ ನಿರ್ದೇಶನಾಲಯದ ಆರು ಅಧಿಕಾರಿಗಳಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ನಿರ್ದೇಶನಾಲಯದ ಕೇಂದ್ರ ಕಚೇರಿಯನ್ನು ಎರಡು ದಿನಗಳ ಕಾಲ ಸೀಲ್ ಮಾಡಲಾಗಿದೆ. ಈ ಆರು ಅಧಿಕಾರಿಗಳ ಜತೆ ಸಂಪರ್ಕ ಹೊಂದಿದ್ದ ಹತ್ತಕ್ಕೂ ಅಧಿಕ ಅಧಿಕಾರಿಗಳನ್ನು ಕ್ವಾರಂಟೈನ್ ಗೊಳಪಡಿಸಲಾಗಿದೆ.

ಇತ್ತೀಚೆಗೆ ಈಡಿ ಕೇಂದ್ರ ಕಚೇರಿಯ ಎಸ್ಟಾಬ್ಲಿಶ್ಮೆಂಟ್ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಕಿರಿಯ ಶ್ರೇಣಿಯ ಅಧಿಕಾರಿಯೊಬ್ಬರಿಗೆ ಕೊರೋನ ಸೋಂಕು ದೃಢ ಪಟ್ಟಿತ್ತು. ಅವರು ಕೇಂದ್ರ ಅರೆಸೇನಾ ಪಡೆಯಿಂದ ತನಿಖಾ ಏಜನ್ಸಿಗೆ ನಿಯೋಜಿಸಲ್ಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News