ಮಿಯಾಂವ್ ಮಿಯಾಂವ್’: ಬೆಕ್ಕಿನ ಚಿತ್ರದೊಂದಿಗೆ ಎಚ್ಚರಿಕೆ ಸಂದೇಶ ರವಾನಿಸಿದ ಮುಂಬೈ ಪೊಲೀಸರು
ಮುಂಬೈ, ಜೂ.6: ಸ್ವಾರಸ್ಯಕರ ಮತ್ತು ಸೃಜನಾತ್ಮಕ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಹೆಸರಾಗಿರುವ ಮುಂಬೈ ಪೊಲೀಸರು ಈಗ ಇಂತಹುದ್ದೇ ಮತ್ತೊಂದು ಟ್ವೀಟ್ ಮೂಲಕ ಗಮನ ಸೆಳೆದಿದ್ದಾರೆ. ಆದರೆ ಇದು ಕೇವಲ ಸಂದೇಶ ಮಾತ್ರವಲ್ಲ, ಎಚ್ಚರಿಕೆಯೂ ಆಗಿದೆ.
‘ಮಿಯಾಂವ್ ಮಿಯಾಂವ್’ ಮಾತ್ರ ಸ್ವೀಕಾರಾರ್ಹವಾಗಿದೆ. ಡ್ರಗ್ಸ್ (ಮಾದಕ ವಸ್ತು) ಬೇಡ ಎನ್ನಿ’ ಎಂಬ ಸಂದೇಶವನ್ನು ಬೆಕ್ಕಿನ ಚಿತ್ರದೊಂದಿಗೆ ಪೋಸ್ಟ್ ಮಾಡಲಾಗಿದೆ. ಮಿಯಾಂವ್ ಮಿಯಾಂವ್ ಎಂಬುದು ನಿಷೇಧಿತ ಮಾದಕ ವಸ್ತುವಿನ ಅಡ್ಡಹೆಸರು. ಮೆಫೆಡ್ರೋನ್ ಎಂಬುದು ಇದರ ವೈಜ್ಞಾನಿಕ ಹೆಸರು. ಇದು ಕೊಕೈನ್‌ನಂತೆಯೇ ಪ್ರಭಾವ ಬೀರುತ್ತದೆ. ಇಂಟರ್‌ನೆಟ್ ಮೂಲಕದ ವ್ಯವಹಾರದಲ್ಲಿ ಇದಕ್ಕೆ ಭಾರೀ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ 2007ರಿಂದ ‘ಮಿಯಾಂವ್, ಮಿಯಾಂವ್’ ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತಿದೆ.
ಅನುಸೂಚಿತ 1ರ ಪಟ್ಟಿಯಲ್ಲಿರುವ ಮಾದಕವಸ್ತುಗಳ ಮೇಲೆ ಮೊದಲೇ ಅಸ್ತಿತ್ವದಲ್ಲಿರುವ ನಿಷೇಧದಿಂದ ನುಣುಚಿಕೊಳ್ಳುವ ಉದ್ದೇಶದಿಂದ ‘ಮಿಯಾಂವ್ ಮಿಯಾಂವ್’ ಮಾದಕವಸ್ತುವಿನ ಉತ್ಪಾದನೆ ಆರಂಭಿಸಲಾಗಿದೆ.