​ಕೋವಿಡ್ : ದೇಶದಲ್ಲಿ ಸಾವಿನ ಸಂಖ್ಯೆ ಒಂದೇ ದಿನ 2000 ಹೆಚ್ಚಳ !

Update: 2020-06-17 04:06 GMT

ಹೊಸದಿಲ್ಲಿ : ದೇಶದಲ್ಲಿ ಒಂದೇ ದಿನ ಕೋವಿಡ್-19 ಸೋಂಕಿತರ ಸಂಖ್ಯೆ 2003 ಹೆಚ್ಚಳವಾಗಿದ್ದು, ದೇಶದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ಸಾವಿನ ಪ್ರಕರಣಗಳು ಮಹಾರಾಷ್ಟ್ರ ಹಾಗೂ ದೆಹಲಿಯಿಂದ ವರದಿಯಾಗಿವೆ. ಆದರೆ ಈ ಪೈಕಿ ಬಹಳಷ್ಟು ಸಾವುಗಳು ಈ ಹಿಂದೆ ಸಂಭವಿಸಿ, ವರದಿಯಾಗದ ಪ್ರಕರಣಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ದಿಢೀರ್ ಏರಿಕೆಯಿಂದ ಒಂದೇ ದಿನ ಸಾವಿನ ಸಂಖ್ಯೆ ಶೇಕಡ 20ರಷ್ಟು ಹೆಚ್ಚಿ, 11,914ಕ್ಕೇರಿದೆ. ಅಂತೆಯೇ ಕೋವಿಡ್-19 ಸೋಂಕಿತರ ಪೈಕಿ ಸಾವಿನ ದರ 2.9 ರಿಂದ 3.4ಕ್ಕೇರಿದೆ.

ದೇಶದಲ್ಲಿ ಮಂಗಳವಾರ 10,914 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 3,53,892ಕ್ಕೇರಿದೆ. ಕೇವಲ ನಾಲ್ಕು ದಿನಗಳಲ್ಲಿ ಪ್ರಕರಣಗಳ ಸಂಖ್ಯೆ 50 ಸಾವಿರದಷ್ಟು ಹೆಚ್ಚಿದೆ. ಮಹಾರಾಷ್ಟ್ರ ಸರ್ಕಾರಕ್ಕೆ ಮಂಗಳವಾರ ಆಘಾತಕಾರಿ ದಿನವಾಗಿದ್ದು, ಒಂದೇ ದಿನ ರಾಜ್ಯದಿಂದ 1328 ಸಾವು ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಬಹುತೇಕ ಪ್ರಕರಣಗಳು ಈ ಹಿಂದೆ ಸಾವು ಸಂಭವಿಸಿ, ವರದಿಯಾಗದ ಪ್ರಕರಣಗಳು ಎನ್ನಲಾಗಿದೆ. ಮುಂಬೈನಲ್ಲಿ 862 ಮಂದಿ ಜೀವ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 4128ರಿಂದ 5537ಕ್ಕೇರಿದೆ. ಮುಂಬೈ ಮಹಾನಗರದಲ್ಲೇ ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 3167ಕ್ಕೇರಿದೆ. ಅಂತೆಯೇ ದೆಹಲಿಯಲ್ಲಿ 437 ಸಾವಿನ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 1837ಕ್ಕೇರಿದೆ. ತಮಿಳುನಾಡಿನಲ್ಲಿ ಮಂಗಳವಾರ 49 ಮಂದಿ ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News