ಹೈನುಗಾರಿಕೆ,ಕೋಳಿ ಸಾಕಣೆ ಮತ್ತು ಮಾಂಸ ಘಟಕಗಳಿಗೆ 15,000 ಕೋ.ರೂ.ಗಳ ಮೂಲಸೌಕರ್ಯ ನಿಧಿ ಘೋಷಣೆ

Update: 2020-06-24 14:31 GMT

 ಹೊಸದಿಲ್ಲಿ,ಜೂ.24: ಖಾಸಗಿ ಕ್ಷೇತ್ರದಲ್ಲಿ ಹೈನುಗಾರಿಕೆ,ಕೋಳಿ ಸಾಕಣೆ ಮತ್ತು ಮಾಂಸ ಸಂಸ್ಕರಣೆ ಘಟಕಗಳ ಸ್ಥಾಪನೆಗಾಗಿ ಶೇ.3ರವರೆಗೆ ಬಡ್ಡಿ ಸಹಾಯಧನವನ್ನು ಒದಗಿಸಲು ನೂತನ 15,000 ಕೋ.ರೂ.ಗಳ ಮೂಲಸೌಕರ್ಯ ನಿಧಿಯನ್ನು ಕೇಂದ್ರವು ಬುಧವಾರ ಪ್ರಕಟಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಸಂಬಂಧ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಸರಕಾರದ ಈ ಕ್ರಮವು ಎಲ್ಲರಿಗೂ ಮುಕ್ತವಾಗಿದೆ ಮತ್ತು ಹಾಲು ಉತ್ಪಾದನೆಯನ್ನು ಹೆಚ್ಚಿಸಲು,ರಫ್ತುಗಳನ್ನು ಉತ್ತೇಜಿಸಲು ಮತ್ತು 35 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲು ನೆರವಾಗಲಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ನೂತನ ಮೂಲಸೌಕರ್ಯ ನಿಧಿಯು ಕೋವಿಡ್-19 ಲಾಕ್‌ಡೌನ್‌ನಿಂದಾಗಿ ತೊಂದರೆಗೆ ಸಿಲುಕಿದವರಿಗೆ ನೆರವಾಗಲು ಪ್ರಕಟಿಸಲಾಗಿದ್ದ 20 ಲ.ಕೋ.ರೂ.ಗಳ ವಿಶೇಷ ಆರ್ಥಿಕ ಪ್ಯಾಕೇಜಿನ ಭಾಗವಾಗಿದೆ ಮತ್ತು ಈ ಘಟಕಗಳನ್ನು ಸ್ಥಾಪಿಸಲು ಇದೇ ಮೊದಲ ಬಾರಿ ಬಡ್ಡಿ ಸಹಾಯಧನವನ್ನು ನೀಡಲಾಗುತ್ತಿದೆ ಎಂದು ಪಶು ಸಂಗೋಪನಾ ಸಚಿವ ಗಿರಿರಾಜ ಸಿಂಗ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News