ನಿವೃತ್ತಿಗೆ ನಾಲ್ಕು ದಿನವಿರುವಾಗ ಕೋವಿಡ್-19ಗೆ ಬಲಿಯಾದ ನರ್ಸ್

Update: 2020-06-27 05:48 GMT

ಹೈದರಾಬಾದ್, ಜೂ. 27: ಇಲ್ಲಿನ ಸರಕಾರಿ ಆಸ್ಪತ್ರೆಯ ಮುಖ್ಯ ನರ್ಸ್‌ವೊಬ್ಬರು ಕೋವಿಡ್-19 ಸೋಂಕಿನಿಂದಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಸರಕಾರಿ ಜನರಲ್ ಹಾಗೂ ಹೃದಯ ಆಸ್ಪತ್ರೆಯಲ್ಲಿನ ಹಿರಿಯ ನರ್ಸ್ ಜೂನ್ ಅಂತ್ಯಕ್ಕೆ ಸೇವಾ ನಿವೃತ್ತಿಯಾಗುವವರಿದ್ದರು. ಆದರೆ, ಅವರು ಗಂಭೀರ ಸ್ಥಿತಿಯಲ್ಲಿ ಗಾಂಧಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

  "ಹೆಡ್ ನರ್ಸ್ ಗವರ್ನಮೆಂಟ್ ಜನರಲ್ ಹಾಗೂ ಚೆಸ್ಟ್ ಹಾಸ್ಪಿಟಲ್‌ನಲ್ಲಿ ಕೆಲಸ ಮಾಡುತ್ತಿದ್ದರು.ಕೋವಿಡ್-19 ಸೋಂಕು ದೃಢಪಟ್ಟ ಬಳಿಕ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಡಯಾಬಿಟಿಸ್ ಕಾಯಿಲೆ ಇತ್ತು ಎರಡು ದಿನಗಳ ಹಿಂದೆ ಅವರನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ಆದರೆ, ಚೇತರಿಸಿಕೊಳ್ಳಲು ವಿಫಲರಾದ ನರ್ಸ್ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ'' ಎಂದು ಗಾಂಧಿ ಆಸ್ಪತ್ರೆಯ ಡಾ. ಪ್ರಭಾಕರ್ ರೆಡ್ಡಿ ಎಎನ್‌ಐಗೆ ತಿಳಿಸಿದ್ದಾರೆ.

ಹೈದರಾಬಾದ್‌ನಲ್ಲಿ ಇದೇ ಮೊದಲ ಬಾರಿ ಹಿರಿಯ ನರ್ಸ್ ವೊಬ್ಬರು ಕೋವಿಡ್-19 ಕಾಯಿಲೆಗೆ ಮೃತಪಟ್ಟಿದ್ದಾರೆ. ವೈದ್ಯಕೀಯ ರಜೆಯಲ್ಲಿದ್ದ ನರ್ಸ್ ಸಿಬ್ಬಂದಿಯ ಕೊರತೆಯ ಕಾರಣಕ್ಕೆ ಮತ್ತೆ ಕೆಲಸಕ್ಕೆ ಸೇರಿದ್ದರು. ಕೋವಿಡ್-19 ವಾರ್ಡ್‌ನಲ್ಲಿ ಕರ್ತವ್ಯದಲ್ಲಿದ್ದರು. ಈ ವೇಳೆ ಅವರಿಗೆ ಸೋಂಕು ತಗಲಿರಬಹುದು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News