ಮೂವರು ಶಾಲಾ ಬಾಲಕರಿಂದ ಸಹಪಾಠಿಯ ಮೇಲೆ ಏಳು ತಿಂಗಳುಗಳ ಕಾಲ ಅತ್ಯಾಚಾರ !

Update: 2020-07-03 10:10 GMT

ಜೈಪುರ: ಹನ್ನೆರಡನೇ ತರಗತಿಯಲ್ಲಿ ಓದುತ್ತಿದ್ದ ಹದಿಹರೆಯದ ಮೂವರು, ಸಹಪಾಠಿಯ ಮೇಳೆ ನಿರಂತರ ಏಳು ತಿಂಗಳ ಕಾಲ ಅತ್ಯಾಚಾರ ನಡೆಸಿದ ಭಯಾನಕ ಪ್ರಕರಣ ವರದಿಯಾಗಿದೆ.

ಅವರು ಈ ಕುರಿತ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಹದಿಹರೆಯದ ಯುವತಿಯ ಚಿಕ್ಕಪ್ಪ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಫಲೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿಗಳು ತಲೆ ಮರೆಸಿಕೊಂಡಿದ್ದಾರೆ.

ಅಪ್ರಾಪ್ತ ವಯಸ್ಸಿನ ಯುವತಿ ತನ್ನ ಸಹಪಾಠಿಯ ಜತೆ ಪ್ರೇಮ ಸಂಬಂಧ ಹೊಂದಿದ್ದಳು ಎನ್ನಲಾಗಿದ್ದು, ಆತ ದೈಹಿಕ ಸಂಪರ್ಕವನ್ನೂ ಸಾಧಿಸಿದ್ದ. ಈ ಬಗ್ಗೆ ವೀಡಿಯೊ ಚಿತ್ರೀಕರಣ ಮಾಡಿಕೊಂಡಿದ್ದ. ಇದನ್ನು ವೈರಲ್ ಮಾಡುವುದಾಗಿ ಬೆದರಿಸಿದ ಮತ್ತಿಬ್ಬರು ಹುಡುಗರು ಕೂಡಾ ಆಕೆಯ ಮೇಲೆ ಅತ್ಯಾಚಾರ ಎಸಗಿದರು. ಹೀಗೆ 17 ವರ್ಷದ ಯುವತಿಯನ್ನು ಏಳು ತಿಂಗಳ ಕಾಲ ಅತ್ಯಾಚಾರ ನಡೆಸಿದ್ದರು ಎಂದು ಆಪಾದಿಸಲಾಗಿದೆ.

ವೀಡಿಯೊ ಬಹಿರಂಗಗೊಳ್ಳುವ ಭೀತಿಯಲ್ಲಿ ಯುವತಿ ಘಟನೆ ಬಗ್ಗೆ ಮಾಹಿತಿ ನೀಡಿರಲಿಲ್ಲ. ಮೂವರ ವಿರುದ್ಧ ಪೋಕ್ಸೋ ಕಾಯ್ದೆಯ ಅನ್ವಯ ಮತ್ತು ಐಟಿ ಕಾಯ್ದೆಯ ಸೆಕ್ಷನ್ 67ರ ಅನ್ವಯ ಪ್ರಕರಣ ದಾಖಲಾಗಿದೆ.

ಇದಕ್ಕೂ ಮುನ್ನ ರಾಜಸ್ಥಾನದ ತಾನಗಾಝಿ ಪಟ್ಟಣದಲ್ಲಿ ಇಂಥದ್ದೇ ಘಟನೆ ವಿಶ್ವವನ್ನು ಬೆಚ್ಚಿ ಬೀಳಿಸಿತ್ತು. 18 ವರ್ಷದ ವಿವಾಹಿತ ದಲಿತ ಮಹಿಳೆಯ ಮೇಲೆ ಆಕೆಯ ಪತಿಯ ಎದುರಲ್ಲೇ ಐವರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಈ ಪೈಕಿ ಒಬ್ಬ ಈ ಘಟನೆಯ ವೀಡಿಯೊ ಚಿತ್ರೀಕರಿಸಿ ದಂಪತಿಯಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹಣ ನೀಡದಿದ್ದರೆ ವೀಡಿಯೊ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದ. ಬಳಿಕ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News