ಎಲ್‌ಎಸಿ ಬಿಕ್ಕಟ್ಟು ಉಲ್ಬಣಿಸುವಂತಹ ಯಾವುದೇ ಕೃತ್ಯದಿಂದ ದೂರವಿರಿ: ಮೋದಿ ಲಡಾಕ್ ಭೇಟಿ ಚೀನಾ ಕಿರಿಕ್
Update: 2020-07-03 16:58 GMT
ಬೀಜಿಂಗ್,ಜು.4: ಪ್ರಧಾನಿ ನರೇಂದ್ರ ಮೋದಿ ಅವರ ಶುಕ್ರವಾರ ಲಡಾಕ್‌ಗೆ ದಿಢೀರ್ ಭೇಟಿ ನೀಡಿರುವುದಕ್ಕೆ ಚೀನಾ ಅಸಮಾಧಾನ ವ್ಯಕ್ತಪಡಿಸಿದೆ. ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿನ ಬಿಕ್ಕಟ್ಟನ್ನು ಉಲ್ಬಣಿಸುವಂತೆ ಮಾಡುವ ಕೃತ್ಯದಲ್ಲಿ ಯಾರೂ ಕೂಡಾ ತೊಡಗಬಾರದು ಎಂದು ಅದು ಹೇಳಿದೆ.
‘‘ಮಿಲಿಟರಿ ಹಾಗೂ ರಾಜತಾಂತ್ರಿಕ ವಾಹಿನಿಗಳ ಮೂಲಕ ಉದ್ವಿಗ್ನತೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಭಾರತ ಹಾಗೂ ಚೀನಾ ಸಮಾಲೋಚನೆ ಹಾಗೂ ಸಂಹನದಲ್ಲಿ ತೊಡಗಿವೆ, ಈ ಹಂತದಲ್ಲಿ ಯಾರೂ ಕೂಡಾ ಪರಿಸ್ಥಿತಿಯನ್ನು ಉಲ್ಬಣಗೊಳಿಸುವಂತಹ ಕೃತ್ಯದಲ್ಲಿ ತೊಡಗಕೂಡದು’’ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾಯ ಝಾವೊ ಲಿಜಿಯಾನ್ ತಿಳಿಸಿದ್ದಾರೆ.