ಸ್ಟ್ಯಾಂಡ್ ಅಪ್ ಕಾಮಿಡಿಯನ್ ಅಗ್ರಿಮಾ ಜೋಶುವಾಗೆ ಅತ್ಯಾಚಾರದ ಬೆದರಿಕೆ: ಕಿಡಿಗೇಡಿಯ ಬಂಧನ

Update: 2020-07-13 18:17 GMT

ಹೊಸದಿಲ್ಲಿ: ಸ್ಟ್ಯಾಂಡ್ ಅಪ್ ಕಾಮಿಡಿಯನ್ ಅಗ್ರಿಮಾ ಜೋಶುವಾರಿಗೆ ಅತ್ಯಾಚಾರದ ಬೆದರಿಕೆಯೊಡ್ಡಿದ ಯುಟ್ಯೂಬರ್ ಶುಭಂ ಮಿಶ್ರಾನನ್ನು ವಡೋದರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಛತ್ರಪತಿ ಶಿವಾಜಿಯನ್ನು ಅಗ್ರಿಮಾ ಅವಮಾನಿಸಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಆನ್ ಲೈನ್ ನಲ್ಲಿ ದ್ವೇಷವನ್ನು ಹರಡಲಾಗಿತ್ತು. ಹಲವರು ಅವರಿಗೆ ಬೆದರಿಕೆಯೊಡ್ಡಿದ್ದರು.

ಈ ನಡುವೆ ಶುಭಂ ಮಿಶ್ರಾ ಎಂಬಾತ ವಿಡಿಯೋ ಮಾಡಿ ಅಗ್ರಿಮಾರನ್ನು ಅತ್ಯಾಚಾರಗೈಯುವುದಾಗಿ ಬೆದರಿಕೆಯೊಡ್ಡಿದ್ದ. ಈ ವಿಡಿಯೋ ವೈರಲ್ ಆಗಿ ಭಾರೀ ಆಕ್ರೋಶ ಸೃಷ್ಟಿಯಾದ ನಂತರ ಈತನನ್ನು ವಡೋದರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News