ಸೌದಿ ಅರೇಬಿಯಾದಲ್ಲಿ ತುಂಬೆ ಗ್ರೂಪ್‌ನ 'ಬ್ಲೆಂಡ್ಸ್ ಆ್ಯಂಡ್ ಬ್ರೂಸ್' ಶೀಘ್ರ ಆರಂಭ

Update: 2020-12-20 18:11 GMT

ದುಬೈ : ಡಾ. ತುಂಬೆ ಮೊಯಿದೀನ್ ಅವರು ಸ್ಥಾಪಿಸಿರುವ ತುಂಬೆ ಗ್ರೂಪ್‌ನ ಹಾಸ್ಪಿಟಾಲಿಟಿ ವಿಭಾಗದಡಿ ಕಾರ್ಯಾಚರಿಸುತ್ತಿರುವ ಯುಎಇಯ ಖ್ಯಾತ ಕಾಫಿ ಶಾಪ್‌ಗಳ ಸರಣಿ ಬ್ಲೆಂಡ್ಸ್ ಆ್ಯಂಡ್ ಬ್ರೂಸ್ ಕಾಫಿ ಶಾಪೆ ಸೌದಿ ಅರೇಬಿಯಾದಲ್ಲಿ ತನ್ನ ಮೊದಲ ರೆಸ್ಟೋರಂಟ್ ಅನ್ನು ಶೀಘ್ರವೇ ಪ್ರಾರಂಭಿಸಲಿದೆ.

ಇದಕ್ಕಾಗಿ ತುಂಬೆ ಗ್ರೂಪ್‌ನ ಹಾಸ್ಪಿಟಾಲಿಟಿ ವಿಭಾಗವು ಸುಲ್ತಾನ್ ಸಾದ್ ಸೀದ್ ಅಲ್ ಕಹ್ತಾನಿ ಟ್ರೇಡಿಂಗ್ ಇಎಸ್‌ಟಿ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ಒದಗಿಸುವಲ್ಲಿ ಹೆಸರುವಾಸಿಯಾಗಿರುವ ಬ್ಲೆಂಡ್ಸ್ ಆ್ಯಂಡ್ ಬ್ರೂಸ್ ಬಿಸಿ ಮತ್ತು ತಂಪು ಪಾನೀಯಗಳ ವ್ಯಾಪಕ ಶ್ರೇಣಿಯನ್ನು ಹೊಂದಿದೆ ಹಾಗೂ ಸ್ಥಳೀಯ ಮತ್ತು ಅಂತರ್ ರಾಷ್ಟ್ರೀಯ ರುಚಿಗಳ ವಿವಿಧ ಲಘು ಖಾದ್ಯಗಳನ್ನು ತನ್ನ ಗ್ರಾಹಕರಿಗೆ ಉಣಬಡಿಸುತ್ತಿದೆ. ಅದು ಸಕ್ಕರೆ ಮುಕ್ತ ಪಾನೀಯಗಳು,ಕುಕಿಗಳು ಮತ್ತು ಕೇಕ್‌ಗಳನ್ನೂ ಒದಗಿಸುತ್ತದೆ.

ಸೌದಿ ಅರೇಬಿಯದಲ್ಲಿ ಮೊದಲ ರೆಸ್ಟೋರೆಂಟ್‌ನ ಆರಂಭವು ಬ್ಲೆಂಡ್ಸ್ ಆ್ಯಂಡ್ ಬ್ರೂಸ್‌ನ ಬೆಳವಣಿಗೆ ಮತ್ತು ವಿಸ್ತರಣೆಯಲ್ಲಿ ನೂತನ ಮೈಲಿಗಲ್ಲಾ ಗಲಿದೆ ಎಂದು ಡಾ.ತುಂಬೆ ಮೊಯಿದೀನ್ ಹರ್ಷ ವ್ಯಕ್ತಪಡಿಸಿದ್ದಾರೆ.

‘ಪ್ರೀಮಿಯಂ ಬ್ರಾಂಡ್ ಆಗಿರುವ ಬ್ಲೆಂಡ್ಸ್ ಆ್ಯಂಡ್ ಬ್ರೂಸ್‌ನಿಂದ ನಾವು ತುಂಬ ಪ್ರಭಾವಿತರಾಗಿದ್ದೇವೆ ಮತ್ತು ಅವರು ಒದಗಿಸುವ ಮೆನು ಸೌದಿ ಅರೇಬಿಯಕ್ಕೆ ಅತ್ಯಂತ ಸೂಕ್ತವಾಗಿದೆ. ಸೌದಿ ಅರೇಬಿಯಾದಲ್ಲಿ ಹಲವು ರೆಸ್ಟೋರಂಟ್‌ಗಳ ಸ್ಥಾಪನೆಯೊಂದಿಗೆ ಈ ಬ್ರಾಂಡ್ ಅನ್ನು ವಿಸ್ತರಿಸಲು ನಮಗೆ ಆನಂದವಾಗುತ್ತಿದೆ ’ಎಂದು ಸುಲ್ತಾನ್ ಸಾದ್ ಸೀದ್ ಅಲ್ ಕಹ್ತಾನಿ ಟ್ರೇಡಿಂಗ್ ಇಎಸ್‌ಟಿಯ ಆಡಳಿತ ನಿರ್ದೇಶಕ ಅಲ್ತಾಫ್ ಹುಸೇನ್ ಹೇಳಿದ್ದಾರೆ.

ಪ್ರದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕಾಫಿ ಶಾಪ್ ಸರಣಿಯಾಗಿರುವ ಬ್ಲೆಂಡ್ಸ್ ಆ್ಯಂಡ್ ಬ್ರೂಸ್ ಭಾರತದಲ್ಲಿ ಹೈದರಾಬಾದ್‌ನ ಜೊತೆ ಯುಎಇಯ ವಿವಿಧ ಗಣರಾಜ್ಯಗಳಲ್ಲಿ ತನ್ನ ಹಲವಾರು ಔಟ್‌ಲೆಟ್‌ಗಳನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News