ಕೆಎಂ ಶರೀಫ್ ನಿಧನ ಸಮುದಾಯಕ್ಕೆ ತುಂಬಲಾರದ ನಷ್ಟ : ಐಎಫ್ಎಫ್ ಸಂತಾಪ

Update: 2020-12-23 05:47 GMT

ರಿಯಾದ್ : ಪಿಎಫ್ಐ ರಾಷ್ಟ್ರೀಯ ನಾಯಕ ಕೆ.ಎಂ. ಶರೀಫ್ ಅವರ ನಿಧನವು ಸಮುದಾಯ ಹಾಗೂ ಸಂಘಟಿತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಇಂಡಿಯಾ ಫ್ರಟರ್ನಿಟಿ ಫೋರಂ ಕರ್ನಾಟಕ ಚಾಪ್ಟರ್, ಸೌದಿ ಅರೇಬಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ತನ್ನ ಜೀವನದ ಬಹುಪಾಲು ಸಮಯವನ್ನು ಸಮುದಾಯ ಸಬಲೀಕರಣಕ್ಕಾಗಿ ಮುಡಿಪಾಗಿಟ್ಟು, ದಲಿತ, ದಮನಿತ, ಅಲ್ಪಸಂಖ್ಯಾತ ಅಭಿವೃದ್ಧಿಯ ಬಗ್ಗೆ ಅಪಾರ ಕಾಳಜಿ ಹಾಗೂ ಕರಾವಳಿಯಲ್ಲಿ ಪ್ಯಾಶಿಸ್ಟರ ಅಟ್ಟಹಾಸದ ವಿರುದ್ಧ ಯುವಕರನ್ನು ಸಂಘಟಿಸಿ, ರಾಷ್ಟ್ರಾದ್ಯಂತ ಸಬಲೀಕರಣದ ಸಂದೇಶವನ್ನು ಹೊತ್ತು ಸಂಚರಿಸಿ, ಸಂಚಲನ ಮೂಡಿಸಿದ ಅವರ ಸೇವೆಯು ಇಂದು ಜನಮಾನಸದಲ್ಲಿ ಹಸಿರಾಗಿದೆ.

ದಣಿವರಿಯದ ಈ ನಾಯಕನ ಮಾದರಿ ಜೀವನ ಹಾಗೂ ಅವರ ಸೈದ್ಧಾಂತಿಕ ಚಿಂತನೆಗಳನ್ನು ಮುಂದಿನ ತಲೆಮಾರುಗಳವರೆಗೂ ಸಮುದಾಯ ಅಳವಡಿಸಿಕೊಂಡು ನಿಜವಾದ ಗುರಿಮುಟ್ಟುವಲ್ಲಿ  ಸಫಲಗೊಳ್ಳಬೇಕಿದೆ ಎಂದು ಐಎಫ್ಎಫ್ ಕರ್ನಾಟಕ ಚಾಪ್ಟರ್ ಸೌದಿ ಅರೇಬಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News