ಚುನಾವಣಾ ಆಯೋಗದಿಂದ ಕೋಲ್ಕತಾದ 8 ಕ್ಷೇತ್ರಗಳ ಚುನಾವಣಾ ಅಧಿಕಾರಿಗಳ ಅಮಾನತು

Update: 2021-04-07 16:49 GMT

ಕೋಲ್ಕತಾ, ಎ. 7: ಪಶ್ಚಿಮಬಂಗಾಳ ವಿಧಾನ ಸಭೆ ಚುನಾವಣೆಗೆ ಎಪ್ರಿಲ್ 26 ಹಾಗೂ 29ರಂದು ಎರಡನೇ ಹಂತದ ಮತದಾನ ನಡೆಯಲಿರುವ ಕೋಲ್ಕತಾದ 8 ಕ್ಷೇತ್ರಗಳ ಚುನಾವಣಾ ಅಧಿಕಾರಿಗಳನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ.

ಚೌರಿಂಘೀ, ಎಂಟಲ್ಲಿ, ಭೊವಾನಿಪುರ, ಬೆಲಿಯಘಾಟಾ, ಜೋರಾಸಂಕೋ, ಶ್ಯಾಮ್‌ಪುಕುರ್, ಕಾಶಿಪುರ-ಬೆಲ್ಗಾಚಿಯಾ ಹಾಗೂ ಕೋಲ್ಕತಾ ಬಂದರು ವಿಧಾನ ಸಭೆ ವಿಭಾಗದಲ್ಲಿ ಈಗಾಗಲೇ ನೂತನ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದ ಅವರು ಹೇಳಿದ್ದಾರೆ.

ತಮ್ಮ ಹುದ್ದೆಯನ್ನು ಮೂರು ವರ್ಷಕ್ಕಿಂತ ಹೆಚ್ಚು ನಿರ್ವಹಿಸಿದ 8 ಚುನಾವಣಾ ಅಧಿಕಾರಿಗಳನ್ನು ವಾಡಿಕೆಯಂತೆ ವರ್ಗಾಯಿಸಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಆರಿಝ್ ಅಫ್ತಾಬ್ ಹೇಳಿದ್ದಾರೆ.

ಈ ಅಧಿಕಾರಿಗಳು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ದೂರು ಸ್ವೀಕರಿಸಲಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾ ಅಧಿಕಾರಿಗಳು ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಈ ಪ್ರಕರಣಗಳಲ್ಲಿ ಚುನಾವಣಾ ಅಧಿಕಾರಿಗಳ ವರ್ಗಾವಣೆ ನಿಯಮವನ್ನು ಅನುಸರಿಸಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News