ಅಗತ್ಯವಿರುವ ಎಲ್ಲರಿಗೂ ಲಸಿಕೆ ನೀಡಿ, ರಫ್ತು ತಕ್ಷಣ ನಿಲ್ಲಿಸಿ: ಪ್ರಧಾನಿಗೆ ರಾಹುಲ್ ಗಾಂಧಿ ಪತ್ರ
Update: 2021-04-09 07:50 GMT
ಹೊಸದಿಲ್ಲಿ: ಅಗತ್ಯವಿರುವ ಎಲ್ಲರಿಗೂ ಲಸಿಕೆ ಹಾಕಬೇಕು ಹಾಗೂ ಲಸಿಕೆ ರಫ್ತು ಮಾಡುವುದನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
ಇತರ ಲಸಿಕೆಗಳನ್ನು ತ್ವರಿತವಾಗಿ ಪತ್ತೆ ಹಚ್ಚುವಂತೆಯೂ ಸರಕಾರವನ್ನು ಆಗ್ರಹಿಸಿದ್ದಾರೆ.
ವೈಜ್ಞಾನಿಕ ಸಮುದಾಯ ಹಾಗೂ ಲಸಿಕೆ ಉತ್ಪಾದಕರ ಪ್ರಯತ್ನಗಳು ಕೇಂದ್ರದ ಕಳಪೆ ಅನುಷ್ಠಾನ ಹಾಗೂ ಮೇಲ್ವಿಚಾರಣೆಯಿಂದ ದುರ್ಬಲಗೊಂಡಿದೆ ಎಂದು ರಾಹುಲ್ ಬೆಟ್ಟು ಮಾಡಿದರು.
ಕೋವಿಡ್ ಪ್ರಕರಣಗಳಲ್ಲಿ ದಾಖಲೆಯ ಏರಿಕೆ. ಲಸಿಕೆಗಳ ಪೂರೈಕೆಗಳ ಕುರಿತು ಕೇಂದ್ರ ಹಾಗೂ ರಾಜ್ಯ ಸರಕಾರದ ನಡುವೆ ತೀವ್ರ ತಿಕ್ಕಾಟ ತಲೆದೋರಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಪ್ರಧಾನಿಗೆ ಪತ್ರ ಬರೆದಿದ್ದಾರೆ.