ಉತ್ತರಪ್ರದೇಶ ಪಂಚಾಯತ್‌ ಚುನಾವಣೆ: ಆಗ್ರಾದಲ್ಲಿ ಎರಡು ಮತಪೆಟ್ಟಿಗೆಗಳ ಕಳವು

Update: 2021-04-16 07:07 GMT
Photo: Scroll.in 

ಆಗ್ರಾ: ಉತ್ತರಪ್ರದೇಶದಲ್ಲಿ ಪಂಚಾಯತ್‌ ಮಟ್ಟದ ಚುನಾವಣೆಗಳು ನಡೆಯುತ್ತಿದ್ದು, ಈ ವೇಳೆ ಆಗ್ರಾ ಗ್ರಾಮೀಣ ಕ್ಷೇತ್ರದಲ್ಲಿ ಎರಡು ಮತಪೆಟ್ಟಿಗಳನ್ನು ಕಳವು ಮಾಡಿದ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಪೊಲೀಸರು ಒಟ್ಟು 8 ಮಂದಿಯನ್ನು ಬಂಧಿಸಿದ್ದಾರೆ ಎಂದು PTI  ವರದಿ ಮಾಡಿದೆ.

ರಿಹಾವಾಲಿ ಗ್ರಾಮದಲ್ಲಿ ಗ್ರಾಮದ ಮುಖ್ಯ ಹುದ್ದೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಬೆಂಬಲಿಗರ ನಡುವೆ ಘರ್ಷಣೆ ನಡೆದ ನಂತರ ಈ ಘಟನೆ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಪೂರ್ವ) ಅಶೋಕ್ ವೆಂಕಟ್ ತಿಳಿಸಿದ್ದಾರೆ. ನಾಲ್ಕು ಜನರು ಗಾಯಗೊಂಡಿದ್ದು, ಅವರನ್ನು ಎಸ್‌ಎನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವೆಂಕಟ್ ತಿಳಿಸಿದ್ದಾರೆ.

"ನಾವು ಬೂತ್‌ನಲ್ಲಿ ಮರು ಮತದಾನಕ್ಕಾಗಿ ವಿನಂತಿಸುತ್ತೇವೆ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು" ಎಂದು ಆಗ್ರಾ ಜಿಲ್ಲಾಧಿಕಾರಿ ಪ್ರಭು ನಾರಾಯಣ್ ಸಿಂಗ್ ಹೇಳಿದರು. ಮತದಾನದ ಉಳಿದ ಹಂತಗಳು ಏಪ್ರಿಲ್ 19, ಏಪ್ರಿಲ್ 26 ಮತ್ತು ಏಪ್ರಿಲ್ 29 ರಂದು ನಡೆಯಲಿವೆ. ಮೇ 2 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News