ದೇಶದಾದ್ಯಂತ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣಗಳು: ಟ್ವಿಟರ್‌ ನಾದ್ಯಂತ "ಪ್ರಧಾನಿ ಎಲ್ಲಿದ್ದಾರೆ?" ಟ್ರೆಂಡಿಂಗ್‌

Update: 2021-04-16 14:42 GMT

ಹೊಸದಿಲ್ಲಿ: ದೇಶದಾದ್ಯಂತ ಕೊರೋನ ಪ್ರಕರಣಗಳು ದೈನಂದಿನ ಏರುಗತಿಯಲ್ಲಿ ಸಾಗುತ್ತಿದೆ. ಗುಜರಾತ್‌, ಮಧ್ಯಪ್ರದೇಶ, ಬಿಹಾರ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳು ಕೋವಿಡ್‌ ನಿಂದ ತತ್ತರಿಸುತ್ತಿದೆ. ಹಲವಾರು ಆಸ್ಪತ್ರೆಗಳು ತುಂಬಿ ತುಳುಕುತ್ತಿದ್ದು, ಜನರು ಆಕ್ಸಿಜನ್‌ ಗಾಗಿ ಪರದಾಡುತ್ತಿದ್ದಾರೆ. ಹಲವಾರು ಸ್ಮಶಾನಗಳೂ ತುಂಬಿದ್ದು, ಸಾವಿನ ಸಂಖ್ಯೆ ಅಧಿಕವಾಗಿದೆ. ಪರಿಸ್ಥಿತಿ ಹೀಗಿದ್ದರೂ ಯಾವುದೇ ಮಾತೆತ್ತದ ಪ್ರಧಾನಿ ನರೇಂದ್ರ ಮೋದಿ ಎಲ್ಲಿದ್ದಾರೆ ಎಂದು ಟ್ವಟರ್‌ ನಾದ್ಯಂತ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ #whereisPM  ಟ್ರೆಂಡಿಂಗ್‌ ಆಗಿದೆ.

"ದೇಶವು ಲಸಿಕೆಗಳ, ಆಸ್ಪತ್ರೆ ಮತ್ತು ಬೆಡ್‌ ಗಳ ಕೊರತೆಯನ್ನು ಎದುರಿಸುತ್ತಿದೆ. ಮೋದಿ ತಮ್ಮ ಪಬ್ಲಿಸಿಟಿಯಲ್ಲಿ ನಿರತರಾಗಿದ್ದಾರೆ" ಎಂದು ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಈ ಹಿಂದೆ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ರವರು, "ನರೇಂದ್ರ ಮೋದಿ ಪ್ರಧಾನಿಯಾದರೆ ಭಾರತವು ದುರಂತದತ್ತ ಸಾಗುತ್ತದೆ" ಎಂದು ಹೇಳಿದ್ದ ವೀಡಿಯೋ ಕೂಡಾ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News