ಐಪಿಎಲ್: ರಾಜಸ್ಥಾನ ರಾಯಲ್ಸ್ ಜಯಭೇರಿ
ಮುಂಬೈ: ರಾಜಸ್ಥಾನ ರಾಯಲ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಶನಿವಾರ ನಡೆದ ಐಪಿಎಲ್ ನ 18ನೇ ಪಂದ್ಯದಲ್ಲಿ ಆರು ವಿಕೆಟ್ ಗಳ ಅಂತರದ ಗೆಲುವು ದಾಖಲಿಸಿದೆ.
ಟಾಸ್ ಜಯಿಸಿದ ರಾಜಸ್ಥಾನ ತಂಡ ಕೆಕೆಆರ್ ತಂಡವನ್ನು ಮೊದಲು ಬ್ಯಾಟಿಂಗ್ ಗೆ ಆಹ್ವಾನಿಸಿತು.
ಕ್ರಿಸ್ ಮೊರಿಸ್ ಬೌಲಿಂಗ್ ದಾಳಿಗೆ(4-23)ತತ್ತರಿಸಿದ ಕೋಲ್ಕತಾ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 133 ರನ್ ಗಳಿಸಲಷ್ಟೇ ಶಕ್ತವಾಯಿತು.
ರಾಹುಲ್ ತ್ರಿಪಾಠಿ(36), ಕಾರ್ತಿಕ್(25) ಹಾಗೂ ನಿತೀಶ್ ರಾಣಾ(22)ಎರಡಂಕೆಯ ಸ್ಕೋರ್ ಗಳಿಸಿದರು.
ಗೆಲ್ಲಲು ಸುಲಭ ಸವಾಲು ಪಡೆದ ರಾಜಸ್ಥಾನ 18.5 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿತು.
ರಾಜಸ್ಥಾನದ ಪರವಾಗಿ ನಾಯಕ ಸಂಜು ಸ್ಯಾಮ್ಸನ್(ಔಟಾಗದೆ 42, 41 ಎಸೆತ, 2 ಬೌಂ.1 ಸಿ.)ತಾಳ್ಮೆಯ ಬ್ಯಾಟಿಂಗ್ ಮಾಡಿದರು. ಡೇವಿಡ್ ಮಿಲ್ಲರ್ ಔಟಾಗದೆ 24(23 ಎಸೆತ, 3 ಬೌ.), ಯಶಸ್ವಿ ಜೈಸ್ವಾಲ್(22) ಹಾಗೂ ಶಿವಂ ದುಬೆ(22)ಎರಡಂಕೆಯ ಸ್ಕೋರ್ ಗಳಿಸಿ ತಂಡದ ಗೆಲುವಿಗೆ ಕಾಣಿಕೆ ನೀಡಿದರು.
ಕೆಕೆಆರ್ ಪರ ವರುಣ್ ಚಕ್ರವರ್ತಿ(2-32)ಎರಡು ವಿಕೆಟ್ ಪಡೆದರು.