ಮುಸ್ಲಿಮರೊಂದಿಗಿನ ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ನಾಳೆ ಎಲ್ಲರೂ ಉಪವಾಸ ಕೈಗೊಳ್ಳಿ: ಮಾರ್ಕಂಡೇಯ ಕಟ್ಜು ಮನವಿ

Update: 2021-05-06 15:07 GMT

ಹೊಸದಿಲ್ಲಿ: ಮುಸ್ಲಿಂ ಧರ್ಮೀಯರೊಂದಿಗೆ ಒಗಟ್ಟನ್ನು ಪ್ರದರ್ಶಿಸಲು ಹಾಗೂ ಅವರೊಂದಿಗೆ ಗೌರವ ಸೂಚಿಸುವ ಸಲುವಾಗಿ ನಾಳೆ ಎಲ್ಲರೂ ಉಪವಾಸ ವೃತ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ ನ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಖಟ್ಜು ಕರೆ ನೀಡಿದ್ದಾರೆ. ಈ ಕುರಿತಾದಂತೆ ಅವರು ಟ್ವಿಟರ್‌ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ನಾಳೆ ಮೇ 7ರಂದು ರಮಝಾನ್‌ ತಿಂಗಳ ಕೊನೆಯ ಶುಕ್ರವಾರವಾಗಿದೆ. ನಾನು ನಾಳೆ ಉಪವಾಸ ವೃತ ಕೈಗೊಳ್ಳಲಿದ್ದೇನೆ. ಮುಸ್ಲಿಂ ಸಹೋದರ ಸಹೋದರಿಯರೊಂದಿಗಿನ ಗೌರವ ಮತ್ತು ಒಗ್ಗಟ್ಟನ್ನು ಸೂಚಿಸುವ ಸಲುವಾಗಿ ಕಳೆದ ೨೫ ವರ್ಷಗಳಿಂದಲೂ ನಾನಿದನ್ನು ನಡೆಸುತ್ತಲೇ ಬಂದಿದ್ದೇನೆ. ವಿಶ್ವದಲ್ಲಿರುವ ಎಲ್ಲಾ ಮುಸ್ಲಿಮೇತರರೊಂದಿಗೆ ನಾನು ಈ ದಿನ ಉಪವಾಸ ಕೈಗೊಳ್ಳುವಂತೆ ಮನವಿ ಮಾಡುತ್ತಿದ್ದೇನೆ. ಸಹರಿ ಬೆಳಗ್ಗೆ 4:15 ಹಾಗೂ ಇಫ್ತಾರ್‌ ಸಂಜೆ 7 ಗಂಟೆಗೆ ನಡೆಯಲಿದೆ. ಈ ಸಮಯದ ನಡುವೆ ಏನನ್ನೂ ತಿನ್ನುವುದು, ಕುಡಿಯುವುದು ಮಾಡಬೇಡಿ" ಎಂದು ಟ್ವಿಟರ್‌ ನಲ್ಲಿ ಅವರು ತಿಳಿಸಿದ್ದಾರೆ.

ಫೇಸ್‌ ಬುಕ್‌ ನಲ್ಲಿ ಇನ್ನೂ ಒಂದು ವಾಕ್ಯವನ್ನು ಸೇರಿಸಿರುವ ಅವರು, "ನಮ್ಮೆಲ್ಲರನ್ನು ಧಾರ್ಮಿಕವಾಗಿ ಬೇರ್ಪಡಿಸಲು ಪ್ರಯತ್ನಿಸುವ ಮುಸ್ಲಿಮರನ್ನು ಭಯೋತ್ಪಾದಕರು, ಮತಾಂಧರು ಮತ್ತು ರಾಷ್ಟ್ರವಿರೋಧಿಗಳು ಎಂದು ಚಿತ್ರಿಸುತ್ತಿರುವವರ ವಿರುದ್ಧ ಇದೊಂದು ಸಾಂಕೇತಿಕ ಖಂಡನೆಯಂತೆ ಈ ಉಪವಾಸವನ್ನು ಕೈಗೊಳ್ಳಿ" ಎಂದು ಅವರು ಉಲ್ಲೇಖಿಸಿದ್ದಾರೆ.

Tomorrow, 7th May, is the last Friday of the Holy Month of Ramzan ( alvida juma ). I will be keeping roza tomorrow, as...

Posted by Markandey Katju on Wednesday, 5 May 2021

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News