ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಕೋವಿಡ್ ನಿರೋಧಕ ಔಷಧಿಯ ತುರ್ತು ಬಳಕೆಗೆ ಅನುಮೋದನೆ

Update: 2021-05-08 11:03 GMT

ಹೊಸದಿಲ್ಲಿ: ಪ್ರತಿದಿನ ಸಾವಿರಾರು ಜನರನ್ನು ಸಾಯಿಸುತ್ತಿರುವ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ವಿರುದ್ಧ ಭಾರತ ಹೋರಾಡುತ್ತಿರುವಾಗ ಡಿಆರ್‌ಡಿಒ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ಅಭಿವೃದ್ಧಿಪಡಿಸಿದ ಕೊರೊನಾವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುವ ಔ ಷಧಿಯನ್ನು ದೇಶದ ಉನ್ನತ ಔಷಧ ನಿಯಂತ್ರಕವು ತುರ್ತು ಬಳಕೆಗಾಗಿ ಹಸಿರುನಿಶಾನೆ ತೋರಿದೆ.

ಔಷಧವು ಪುಡಿ ರೂಪದಲ್ಲಿ ಪೊಟ್ಟಣದಲ್ಲಿ ಸಿಗಲಿದೆ  ಹಾಗೂ  ಅದನ್ನು ನೀರಿನಲ್ಲಿ ಕರಗಿಸಿ ಸೇವಿಸಬಹುದು.

ಡಿಆರ್‌ಡಿಒ ಲ್ಯಾಬ್ ಮತ್ತು ಹೈದರಾಬಾದ್ ಮೂಲದ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಕೋವಿಡ್ ನಿರೋಧಕ ಔಷಧಿ 2-ಡಿಯೋಕ್ಸಿ-ಡಿ-ಗ್ಲೂಕೋಸ್ (2-ಡಿಜಿ) ಅನ್ನು  ಅಭಿವೃದ್ಧಿಪಡಿಸಿದೆ.

ಔಷಧವು ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಹಾಗೂ  ಪೂರಕ ಆಮ್ಲಜನಕದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ಕ್ಲಿನಿಕಲ್ ಪ್ರಯೋಗ ಫಲಿತಾಂಶಗಳಿಂದ ಗೊತ್ತಾದ ನಂತರ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)ಔಷಧದ ಬಳಕೆಗೆ ಅನುಮೋದನೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News