ಮೇ 16ರಿಂದ 30ರ ತನಕ ಪಶ್ಚಿಮಬಂಗಾಳದಲ್ಲಿ ಲಾಕ್ ಡೌನ್
Update: 2021-05-15 07:34 GMT
ಕೋಲ್ಕತಾ: ಕೊರೋನ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಮೇ 16ರ ಬೆಳಗ್ಗೆ 6ರಿಂದ ಮೇ 30ರ ಸಂಜೆ 6ರ ತನಕ ಲಾಕ್ ಡೌನ್ ಘೋಷಿಸಲಾಗಿದೆ.
ಅಗತ್ಯ ಹಾಗೂ ತುರ್ತು ಸೇವೆಗಳನ್ನು ಹೊರತುಪಡಿಸಿ ಎಲ್ಲ ಸರಕಾರಿ ಹಾಗೂ ಖಾಸಗಿ ಕಚೇರಿಗಳು ಮೇ 16ರಿಂದ 30ರ ತನಕ ಬಂದ್ ಆಗಿರಲಿವೆ ಎಂದು ಪ.ಬಂಗಾಳದ ಮುಖ್ಯ ಕಾರ್ಯದರ್ಶಿ ಹೇಳಿದ್ದಾರೆ.
ಸ್ಥಳೀಯ ರೈಲುಗಳು, ಮೆಟ್ರೋ ಸೇವೆಗಳು, ಅಂತರ್ ರಾಜ್ಯ ಬಸ್ / ರೈಲು ಸಂಪೂರ್ಣ ಬಂದ್ ಆಗಲಿವೆ. ಖಾಸಗಿ ಕಾರುಗಳು, ಟ್ಯಾಕ್ಸಿಗಳು ಹಾಗೂ ಆಟೊ ಸಂಚಾರ ಬಂದ್ ಆಗಿರಲಿದೆ.
ಬೆಳಗ್ಗೆ 9ರಿಂದ 5ರ ತನಕ ಎಲ್ಲ ಹೊರಾಂಗಣ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಜನರು ಹಾಗೂ ವಾಹನಗಳ ಓಡಾಟಕ್ಕೆ ಅವಕಾಶವಿಲ್ಲ.