ಲಸಿಕೆ ಪೂರೈಕೆ ಹೆಚ್ಚಿಸಲು ನಿರಂತರ ಪ್ರಯತ್ನ: ಪ್ರಧಾನಿ ಮೋದಿ
Update: 2021-05-18 09:55 GMT
ಹೊಸದಿಲ್ಲಿ: ಲಸಿಕೆ ಕೊರತೆಯನ್ನು ಹಲವಾರು ರಾಜ್ಯಗಳು ನಿಭಾಯಿಸುತ್ತಿರುವುದರಿಂದ, ಲಸಿಕೆ ಪೂರೈಕೆಯನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
"ಈ ಎಲ್ಲದರ ನಡುವೆ ಲಸಿಕೆ ಚಾಲನೆ ಸಹ ಮುಂದುವರಿಯುತ್ತದೆ ಹಾಗೂ ಲಸಿಕೆ ವ್ಯರ್ಥವಾಗದಂತೆ ನೀವೆಲ್ಲರೂ ಸಹ ಖಚಿತಪಡಿಸಿಕೊಳ್ಳಬೇಕು. ನಾವು ಉತ್ತಮ ಅಭ್ಯಾಸಗಳನ್ನು ಅನುಸರಿಸಿದರೆ ಲಸಿಕೆ ವ್ಯರ್ಥವಾಗುವುದನ್ನು ಕಡಿಮೆಗೊಳಿಸಬಹುದು. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಅಧಿಕಾರಿಗಳು "ಫೀಲ್ಡ್ ಕಮಾಂಡರ್ "ಗಳು ಎಂದು ಮೋದಿ ಪ್ರಶಂಸಿದರು.
ಕೋವಿಡ್-19 ನಿರ್ವಹಣೆಯ ಕುರಿತು ರಾಜ್ಯಗಳು, ಜಿಲ್ಲೆಗಳ ಅಧಿಕಾರಿಗಳನ್ನು ಉದ್ದೇಶಿಸಿ ಮಂಗಳವಾರ ಪ್ರಧಾನಿ ಮಾತನಾಡಿದರು.