ಆಮಿರ್ ಖಾನ್ ವೀಡಿಯೊ ಟ್ವೀಟ್ ಮಾಡಿದ ರಾಮ್‌ ದೇವ್ : ಕಾರಣ ಏನು ಗೊತ್ತೇ?

Update: 2021-05-30 04:31 GMT
(ರಾಮದೇವ್   PTI Photo)

ಹೊಸದಿಲ್ಲಿ: ಭಾರತದ ವೈದ್ಯ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿರುವ ಯೋಗಗುರು ರಾಮ್‌ದೇವ್ ಶನಿವಾರ ಬಾಲಿವುಡ್ ನಟ ಆಮಿರ್ ಖಾನ್ ಅವರ ’ಸತ್ಯಮೇವ ಜಯತೇ’ ಕಾರ್ಯಕ್ರಮ ಕುರಿತ ವೀಡಿಯೊ ಟ್ವೀಟ್ ಮಾಡಿ, ಮೆಡಿಕಲ್ ಮಾಫಿಯಾಗೆ ಇವರ ಮೇಲೆ ಕ್ರಮ ಕೈಗೊಳ್ಳಲು ಧೈರ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ.

ಡಾ. ಸಮಿತ್ ಶರ್ಮಾ ಅವರ ಜತೆ ಆಮಿರ್ ಖಾನ್ ಮಾತನಾಡುತ್ತಿರುವ ದೃಶ್ಯ ಈ ವೀಡಿಯೊದಲ್ಲಿದ್ದು, ಶರ್ಮಾ ಜೆನರಿಕ್ ಔಷಧಿ ಮತ್ತು ಬ್ರಾಂಡೆಡ್ ಔಷಧಿಗಳ ನಡುವಿನ ಬೆಲೆ ವ್ಯತ್ಯಾಸದ ಬಗ್ಗೆ ವಿವರಿಸುತ್ತಿದ್ದಾರೆ.

ಅಲೋಪತಿ ವೈದ್ಯ ಪದ್ಧತಿಯನ್ನು ರಾಮ್‌ ದೇವ್ ಅವಹೇಳನ ಮಾಡಿದ ವೀಡಿಯೊ ಕಳೆದ ವಾರ ವೈರಲ್ ಆದ ಹಿನ್ನೆಲೆಯಲ್ಲಿ ಯೋಗ ಗುರು ಹಾಗೂ ಭಾರತೀಯ ವೈದ್ಯಕೀಯ ಸಂಘದ ನಡುವೆ ತಿಕ್ಕಾಟ ನಡೆಯುತ್ತಿದೆ.

'ಐಎಂಎ' ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ದೂರು ನೀಡಿದ್ದು, ರಾಮ್‌ ದೇವ್ ಈ ವೀಡಿಯೊ ವಾಪಾಸು ಪಡೆದು ವಿಷಾದ ಸೂಚಿಸಿದ್ದರು. ಐಎಂಎ ಯೋಗ ಗುರುವಿಕೆ ಕಾನೂನಾತ್ಮಕ ನೋಟಿಸ್ ನೀಡಿದ್ದು, ಪತಂಜಲಿ ಕೂಡಾ ನ್ಯಾಯ ಮಾರ್ಗವನ್ನು ಹಿಡಿಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ಆಚಾರ್ಯ ಬಾಲಕೃಷ್ಣ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News