ಏಮ್ಸ್ ಗೆ ದಾಖಲಾದ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್
Update: 2021-06-01 07:49 GMT
ಹೊಸದಿಲ್ಲಿ: ಕೋವಿಡ್-19 ನಂತರದ ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಹೊಸದಿಲ್ಲಿಯಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಏಮ್ಸ್) ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅವರನ್ನು ದಾಖಲಿಸಲಾಗಿದೆ. 61 ವರ್ಷದ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಎಪ್ರಿಲ್‌ನಲ್ಲಿ ಕೊರೋನವೈರಸ್ ರೋಗಕ್ಕೆ ತುತ್ತಾಗಿದ್ದರು.
ಕೋವಿಡ್ -19 ರಿಂದ ಚೇತರಿಸಿಕೊಂಡ ನಂತರ ರಮೇಶ್ ಪೋಖ್ರಿಯಾಲ್ ಅವರು ಮತ್ತೆ ತಮ್ಮ ಕಚೇರಿ ಕೆಲಸವನ್ನು ಪುನರಾರಂಭಿಸಿದ್ದರು. ಇದೀಗ ಕೋವಿಡ್ ನಂತರದ ಆರೋಗ್ಯ ಸಮಸ್ಯೆಗೆ ಅವರನ್ನು ಏಮ್ಸ್ ಗೆ ದಾಖಲಿಸಲಾಯಿತು.
ರಮೇಶ್ ಪೋಖ್ರಿಯಲ್ ಅವರು ಎಪ್ರಿಲ್ 21 ರಂದು ಕೋವಿಡ್ - ಪರೀಕ್ಷೆ ನಡೆಸಿದ್ದರು. ಕೇಂದ್ರ ಶಿಕ್ಷಣ ಸಚಿವರು ಕೋವಿಡ್-19 ಇರುವುದು ದೃಢಪಟ್ಟಿದೆ ಎಂದು ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಘೋಷಿಸಿದ್ದರು.