'ಸಸ್ಯಾಹಾರಿ ವಿರಾಟ್‌ ಕೊಹ್ಲಿ ಮೆನುವಿನಲ್ಲಿ ಮೊಟ್ಟೆʼ: ಅಭಿಮಾನಿಗಳ ಟ್ರೋಲ್ ಗೆ ನೀಡಿದ ಪ್ರತಿಕ್ರಿಯೆ ಏನು ಗೊತ್ತೇ?

Update: 2021-06-01 15:42 GMT

ಹೊಸದಿಲ್ಲಿ: ನಾನು ಮೊಟ್ಟೆ ತಿನ್ನುತ್ತೇನೆ. ಆದರೆ ಅಪ್ಪಟ ಸಸ್ಯಾಹಾರಿ ಎಂದು ಸೋಮವಾರ ಇನ್ ಸ್ಟಾಗ್ರಾಮ್ ನಲ್ಲಿ “ಆಸ್ಕ್ ಮಿ ಎನಿಥಿಂಗ್’ಸೆಶನ್ ನಲ್ಲಿ ಹೇಳಿಕೊಂಡ ಭಾರತದ ಕ್ರಿಕೆಟ್  ನಾಯಕ ವಿರಾಟ್ ಕೊಹ್ಲಿ ತನ್ನ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದ್ದಲ್ಲದೆ ಟ್ರೋಲ್ ಗೂ ಒಳಗಾದರು.

“ನಾನು ಎಂದೆಂದಿಗೂ ಅಪ್ಪಟ ಸಸ್ಯಾಹಾರಿ ಎಂದು ಹೇಳಿಕೊಂಡಿಲ್ಲ’’ ಎಂದು  ಮೊಟ್ಟೆಯ ಡಯಟ್  ಬಗ್ಗೆ ಅಭಿಮಾನಿಗಳು ಟ್ರೋಲ್ ಮಾಡಿದ ನಂತರ ಕೊಹ್ಲಿ ಈ ಪ್ರತಿಕ್ರಿಯೆ ನೀಡಿದರು.

“ನಾನು ಅಪ್ಪಟ ಸಸ್ಯಾಹಾರಿ ಎಂದು ಎಂದಿಗೂ ಹೇಳಿಕೊಳ್ಳಲಿಲ್ಲ. ನಾನು ನನ್ನ ಆಹಾರ ಶೈಲಿಯಲ್ಲಿ ಸಸ್ಯಾಹಾರವನ್ನು ಬಳಸುತ್ತಿದ್ದೇನೆ.  ಆಳವಾದ ಉಸಿರನ್ನು ತೆಗೆದುಕೊಳ್ಳಿ ಹಾಗೂ  ನಿಮ್ಮ ಸಸ್ಯಾಹಾರವನ್ನು ತಿನ್ನಿರಿ (ನಿಮಗೆ ಬೇಕಾದರೆ) ”ಎಂದು ಕೊಹ್ಲಿ ಮಂಗಳವಾರ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಅಭಿಮಾನಿಯೊಬ್ಬರು ಕೊಹ್ಲಿಬಳಿ ಅವರ ಆಹಾರದ ಬಗ್ಗೆ ಕೇಳಿದಾಗ: "ಬಹಳಷ್ಟು ತರಕಾರಿಗಳು, ಕೆಲವು ಮೊಟ್ಟೆಗಳು, 2 ಕಪ್ ಕಾಫಿ, ಕ್ವಿನೋವಾ, ಸಾಕಷ್ಟು ಪಾಲಕ್ ನನ್ನ ನೆಚ್ಚಿನ ದೋಸೆಗಳನ್ನು ಸೇವಿಸುವೆ. ಆದರೆ ಎಲ್ಲವೂ ನಿಯಂತ್ರಿತ ಪ್ರಮಾಣದಲ್ಲಿವೆ’’ ಎಂದರು.

ಈ ಹಿಂದೆ ತಾನು ಸಂಪೂರ್ಣವಾಗಿ ಸಸ್ಯಾಹಾರಿ ಆಗಿ ಮಾರ್ಪಟ್ಟಿದ್ದೇನೆ ಎಂದಿದ್ದ ಕೊಹ್ಲಿ ಅವರ ಆಹಾರದ ಮೆನುವಿನಲ್ಲಿ  ಮೊಟ್ಟೆ ಇರುವುದು ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿದೆ.  ಅವರ ಪತ್ನಿ ಅನುಷ್ಕಾ ಶರ್ಮಾ ಸಸ್ಯಾಹಾರಿ.  ಕೊಹ್ಲಿ ಜೀವನದಲ್ಲಿ ಈ ಆಹಾರ ರೂಪಾಂತರದಲ್ಲಿ ತಾನು ಪಾತ್ರವಹಿಸಿದ್ದೇನೆ ಎಂದು ಅನುಷ್ಕಾ ಸ್ವತಃ ಒಪ್ಪಿಕೊಂಡಿದ್ದರು. ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್‌ಸನ್‌ರೊಂದಿಗಿನ ಇನ್‌ಸ್ಟಾಗ್ರಾಮ್ ಚಾಟ್‌ನಲ್ಲಿ ಈ ಬದಲಾವಣೆಯ ಹಿಂದಿನ ಕೆಲವು ಆರೋಗ್ಯ ಕಾರಣಗಳನ್ನು ಕೂಡ  ಕೊಹ್ಲಿ ಉಲ್ಲೇಖಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News