ಚಿತ್ರನಟ ಟೈಗರ್ ಶ್ರಾಫ್ ವಿರುದ್ದ ಪ್ರಕರಣ ದಾಖಲಿಸಿದ ಮುಂಬೈ ಪೊಲೀಸ್

Update: 2021-06-02 17:39 GMT
Image Source : TWITTER

ಮುಂಬೈ: ಯಾವುದೇ ಸಮರ್ಪಕ ಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಸುತ್ತಾಡುವ ಮೂಲಕ  ಕೋವಿಡ್ ಸಾಂಕ್ರಾಮಿಕ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಚಿತ್ರ ನಟ ಟೈಗರ್ ಶ್ರಾಫ್ ವಿರುದ್ಧ ಬುಧವಾರ ಪ್ರಕರಣ ದಾಖಲಾಗಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶ್ರಾಫ್ ಅವರು ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್ ಬಳಿ ಸಂಜೆ ಹೊತ್ತು ತಿರುಗಾಡುತ್ತಿರುವುದು ಕಂಡುಬಂದಿದೆ. ಮಧ್ಯಾಹ್ನ 2 ಗಂಟೆಯ ನಂತರ. ಸಮಂಜಸ ಕಾರಣವಿಲ್ಲದೆ ಜನರು ತಮ್ಮ ಮನೆಗಳ ಹೊರಗೆ ಓಡಾಡುವುದಕ್ಕೆ ನಿರ್ಬಂಧಿಸಲಾಗಿದೆ.

"ಸಂಜೆ ಬ್ಯಾಂಡ್‌ಸ್ಟ್ಯಾಂಡ್ ಪ್ರದೇಶದಲ್ಲಿ ಟೈಗರ್ ಶ್ರಾಫ್ ಓಡಾಡುತ್ತಿರುವುದನ್ನು ಪೊಲೀಸ್ ತಂಡ ಗುರುತಿಸಿದೆ. ಪ್ರಶ್ನಿಸಿದಾಗ, ಅವರು  ಹೊರಗೆ ಏಕೆ ತಿರುಗುತ್ತಿದ್ದಾರೆ ಎಂಬುದರ ಬಗ್ಗೆ ತೃಪ್ತಿದಾಯಕ ಉತ್ತರವನ್ನು ನೀಡಲಿಲ್ಲ. ಪೊಲೀಸರು ಅವರ ವಿವರಗಳನ್ನು ತೆಗೆದುಕೊಂಡು ಭಾರತೀಯರ ದಂಡ ಸಂಹಿತೆ  ವಿಭಾಗದ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.

ಇದು ಜಾಮೀನು ಅಪರಾಧವಾದ್ದರಿಂದ ಯಾವುದೇ ಬಂಧನ ಮಾಡಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News