ಲಕ್ಷದ್ವೀಪ ಮೀನುಗಾರಿಕೆ ದೋಣಿಗಳಲ್ಲಿ ಸರಕಾರಿ ಅಧಿಕಾರಿಗಳ ನಿಯೋಜನೆ: ಹೊಸ ನಿರ್ಧಾರ ಕೈಗೊಂಡ ಆಡಳಿತ
ಕೊಚ್ಚಿ: ಸ್ಥಳೀಯ ಮೀನುಗಾರಿಕೆ ದೋಣಿಗಳಲ್ಲಿ ಸರಕಾರಿ ಅಧಿಕಾರಿಗಳನ್ನು ನಿಯೋಜಿಸುವುದು ಸೇರಿದಂತೆ ಹಲವು ಹೊಸ ನಿರ್ಧಾರಗಳನ್ನು ಲಕ್ಷದ್ವೀಪ ಆಡಳಿತ ಕೈಗೊಂಡಿದೆ.
ಬೇಹುಗಾರಿಕೆ ಮಾಹಿತಿಯನ್ನು ಸಂಗ್ರಹಿಸಲು ದೋಣಿಗಳಲ್ಲಿ ಅಧಿಕಾರಿಗಳನ್ನು ನಿಯೋಜಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಮೇ 28 ರಂದು ಲಕ್ಷದ್ವೀ ಪ ಆಡಳಿತದ ಪ್ರಧಾನ ಕಾರ್ಯದರ್ಶಿ ಅವರ ಅಧ್ಯ ಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕೈಗೊಳ್ಳಲಾಗಿತ್ತು . ಸ್ಥಳೀಯ ಮೀನುಗಾರಿಕೆ ದೋಣಿಗಳು ಹಾಗೂ ಹಡಗುಗಳ ಮೇಲೆ ನಿಗಾವಹಿಸುವ ನಿಟ್ಟಿ ನಲ್ಲಿ ಭದ್ರತಾ ಕ್ರಮಗಳನ್ನು ಬಲಪಡಿಸುವ ಬಗ್ಗೆಯೂ ಸಭೆಯಲ್ಲಿ ನಿರ್ಧರಿಸಲಾಗಿತ್ತು.
ಹೊಸ ಆದೇಶಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಲಕ್ಷದ್ವೀಪ ಸಂಸದ ಮುಹಮ್ಮದ್ ಫೈಝಲ್, ಆದೇಶವನ್ನು ತಕ್ಷಣವೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
“ದ್ವೀ ಪದಲ್ಲಿ ನೂರಾರುದೋಣಿಗಳಿವೆ. ಈ ಎಲ್ಲ ದೋಣಿಗಳಿಗೆ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆಯೇ? ಈಗಾಗಲೇ ಎಲ್ಲ ದ್ವೀ ಪಗಳಲ್ಲಿ ನೌಕಾಪಡೆ ಹಾಗೂ ಕರಾವಳಿ ಪಡೆಯಿಂದ ನಿಗಾವಹಿಸುವ ವ್ಯ ವಸ್ಥೆ ಜಾರಿಯಲ್ಲಿದೆ. ಮೀನುಗಾರರಿಗೂ ಕರಾವಳಿ ಪಡೆ ತರಬೇತಿ ನೀಡಿದೆ. ಈ ರೀತಿಯ ಕಾನೂನುಗಳಿಗೆ ಅರ್ಥ ಇಲ್ಲ’’ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಕೂಡ ಹೊಸ ಕ್ರಮಗಳಿಗೆ ವಿರೋಧ ವ್ಯಕ್ತ ಪಡಿಸಿದೆ. ಸೋಮವಾರ ಕೊಚ್ಚಿಯಲ್ಲಿ ಧರಣಿ ನಡೆಸಲು ನಿರ್ಧರಿಸಿದೆ.