ದೇವಾಲಯದ ಅರ್ಚಕಿಯಾಗಲು ಬಯಸುವ ಮಹಿಳೆಯರಿಗೆ ತಮಿಳುನಾಡು ಸರಕಾರದಿಂದ ತರಬೇತಿ

Update: 2021-06-13 09:38 GMT
photo: pksekarbabu.com

ಚೆನ್ನೈ: ದೇವಾಲಯದ ಅರ್ಚಕಿಯಾಗಲು ಬಯಸುವ ಮಹಿಳೆಯರಿಗೆ ಅಗತ್ಯವಾದ ತರಬೇತಿಯನ್ನು ನೀಡಲಾಗುವುದು ಎಂದು ತಮಿಳುನಾಡು ಸಚಿವ ಪಿ.ಕೆ.ಸೇಕರ್ ಬಾಬು ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು ಈ ಹೇಳಿಕೆ ನೀಡಿದ್ದಾರೆ.

"ಆಸಕ್ತಿ ಹೊಂದಿರುವ ಮಹಿಳೆಯರು ಸಹ ಪುರೋಹಿತರಾಗಬಹುದು; ಅವರಿಗೆ ತರಬೇತಿ ನೀಡಲಾಗುತ್ತದೆ ಹಾಗೂ  ಇಲಾಖೆಯಿಂದ ನಿರ್ವಹಿಸಲ್ಪಡುವ ದೇವಾಲಯಗಳಲ್ಲಿ ನೇಮಕ ಮಾಡಲಾಗುತ್ತದೆ" ಎಂದು ಮಾನವ ಸಂಪನ್ಮೂಲ ಹಾಗೂ  ಸಿಇ ಸಚಿವ ಪಿ.ಕೆ.ಸೇಕರ್ ಬಾಬು ಹೇಳಿದರು.

"ರಾಜ್ಯದ 47 ಎಚ್ ಆರ್ ಹಾಗೂಸಿಇ ದೇವಾಲಯಗಳಲ್ಲಿ ಈಗಾಗಲೇ ತಮಿಳು ಅರ್ಚನೆ ನಡೆಯುತ್ತಿದೆ.  ಈ 47 ದೇವಾಲಯಗಳಲ್ಲಿ, ಶೀಘ್ರದಲ್ಲೇ ಫಲಕಗಳನ್ನು ಹಾಕಲಾಗುವುದು  ಎಂದು ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News