ದಿಲ್ಲಿ ಕಾರ್ಯಕರ್ತರನ್ನು ಬಿಡುಗಡೆ ಮಾಡಲು ನ್ಯಾಯಾಲಯ ಆದೇಶ: ಪೊಲೀಸರ ವಿರುದ್ಧ ಉದ್ದೇಶಪೂರ್ವಕ ವಿಳಂಬದ ಆರೋಪ
ನವದೆಹಲಿ: ಎರಡು ದಿನಗಳ ಹಿಂದೆ ಜಾಮೀನು ಪಡೆದಿದ್ದರೂ ಜೈಲಿನಲ್ಲಿದ್ದ ವಿದ್ಯಾರ್ಥಿ ಕಾರ್ಯಕರ್ತರಾದ ನತಾಶಾ ನರ್ವಾಲ್, ದೇವಂಗಾನ ಕಲಿತಾ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಅವರನ್ನು ಬಿಡುಗಡೆ ಮಾಡಲು ದೆಹಲಿ ನ್ಯಾಯಾಲಯ ಆದೇಶಿಸಿದೆ. ದಿಲ್ಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಅವರು ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲು ವಾಸ ಅನುಭವಿಸಿದ್ದರು.
"ಕಾನೂನಿನ ಸ್ಪಷ್ಟ ಆದೇಶದ ಹೊರತಾಗಿಯೂ ಜಾಮೀನುಗಳನ್ನು ಪರಿಶೀಲಿಸುವ ಹೆಸರುನಲ್ಲಿ ೨೪ ಗಂಟೆ ಮೀರಿಯೂ ಮುಂದುವರಿದಿರುವ ಕಸ್ಟಡಿಯು ಕಾನೂನು ಬಾಹಿರವಾಗಿದೆ. ನಮ್ಮನ್ನು ತಕ್ಷಣ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿ" ಎಂದು ಮೂವರು ತಮ್ಮ ಮನವಿಯಲ್ಲಿ ತಿಳಿಸಿದ್ದರು.
ವಿಳಾಸ ಮತ್ತು ಜಾಮೀನುಗಳ ಪರಿಶೀಲನೆಯಲ್ಲಿನ ವಿಳಂಬದ ಕುರಿತಾದಂತೆ ದಿಲ್ಲಿ ಪೊಲೀಸರನ್ನು ನ್ಯಾಯಾಲಯ ಪ್ರಶ್ನಿಸಿತು. ಆಧಾರ್ ಸಂಖ್ಯೆಯನ್ನು ಪೊಲೀಸರು ಏಕೆ ಪರಿಶೀಲಿಸಬೇಕು? ಎಂದು ಎಂದು ನಮಗೆ ತಿಳಿಯಬೇಕಾಗಿದೆ ಎಂದು ಕೋರ್ಟ್ ಹೇಳಿದೆ. ವಿಚಾರಣಾ ನ್ಯಾಯಾಲಯವು ಪೊಲೀಸರ ಅರ್ಜಿಯನ್ನು ಮಧ್ಯಾಹ್ನ ಮತ್ತು ಕಾರ್ಯಕರ್ತರ ಮನವಿಯನ್ನು ೩:೩೦ಕ್ಕೆ ಆಲಿಸಲಿದೆ ಎಂದು ಹೇಳಿತು.
ಕಾರ್ಯಕರ್ತರಿಗೆ ಜಾಮೀನು ನೀಡಲು ಅನುಮತಿ ನೀಡಿರುವ ನ್ಯಾಯಾಲಯ ಪ್ರತಿಭಟಿಸುವ ಹಕ್ಕು ಮತ್ತು ಭಯೋತ್ಪಾದಕ ಚಟುವಟಿಕೆಯ ನಡುವಿನ ವ್ಯತ್ಯಾಸವನ್ನು ಎತ್ತಿ ಹಿಡಿದಿದೆ ಎಂದು NDTV,COM ತನ್ನ ವರದಿಯಲ್ಲಿ ತಿಳಿಸಿದೆ.