ಆಂಧ್ರಪ್ರದೇಶ: ಆನಂದಯ್ಯರ ಆಯುರ್ವೇದ ಕೋವಿಡ್ ಔಷಧ ಬಳಕೆಯಿಂದ ಹಲವರಿಗೆ ಅನಾರೋಗ್ಯ

Update: 2021-06-19 17:34 GMT

ಹೈದರಾಬಾದ್, ಜೂ. 19: ಕೋರೋನ ಸಾಂಕ್ರಾಮಿಕ ರೋಗ ಗುಣಪಡಿಸುವ ಔಷಧ ಎಂದು ಹೇಳಲಾಗುತ್ತಿರುವ ಆಯುರ್ವೇದ ವೈದ್ಯ ಬಿ. ಆನಂದಯ್ಯ ಅವರ ಔಷಧ ಬಳಕೆಯಿಂದ ಸುಮಾರು 100 ಮಂದಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಕೋವಿಡ್ ರೋಗಿಯಾಗಿದ್ದ ಆಂಧ್ರಪ್ರದೇಶದ ನೆಲ್ಲೂರಿನ ನಿವೃತ್ತ ಮುಖ್ಯೋಪಾದ್ಯಾಯ ಕೋಟಯ್ಯ ಅವರು ಕೋವಿಡ್ ರೋಗಕ್ಕೆ ಬಿ. ಆನಂದಯ್ಯ ಅವರ ಆಯುರ್ವೇದ ಔಷಧ ಬಳಸಿದ್ದರು. ಇದರಿಂದಾಗಿ ಅವರಿಗೆ ಕಣ್ಣಿನ ಉರಿಯೂತ ಆರಂಭವಾಗಿತ್ತು ಹಾಗೂ ಆಮ್ಲಜನಕದ ಮಟ್ಟ ಇಳಿಕೆಯಾಗಿತ್ತು. ಈ ಕಾರಣದಿಂದ ಅವರು ನೆಲ್ಲೂರು ಜಿಲ್ಲೆಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಮೇ 31ರಂದು ಅವರು ಮೃತಪಟ್ಟಿದ್ದರು.
 
ಇದುವರೆಗೆ ಅನಂದಯ್ಯ ಅವರ ಕಣ್ಣಿನ ಔಷಧ ಬಳಸಿದ ಸುಮಾರು 100 ಜನರು ಜನರು ಈ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ನೆಲ್ಲೂರು ಸರಕಾರಿ ಆಸ್ಪತ್ರೆಯ ಜನರಲ್ ಸರ್ಜರಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ. ಕಲೇಶಾ ಬಾಷಾ ಅವರು ಹೇಳಿದ್ದಾರೆ.

ವೈದ್ಯಕೀಯ ಸಮುದಾಯ ಹಾಗೂ ವಿಚಾರವಾದಿಗಳ ತೀವ್ರ ಟೀಕೆಗಳ ನಡುವೆಯೂ ಬಿ. ಆನಂದಯ್ಯ ಅವರ ಕೊರೋನಾದ ಆಯುರ್ವೇದ ಔಷಧ ಬಳಕೆಗೆ ಆಂಧ್ರಪ್ರದೇಶ ಸರಕಾರ ಮೇ 30ರಂದು ಅನುಮತಿ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News