ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ 50ನೇ ಬಾರಿ ಕ್ವಾರ್ಟರ್ ಫೈನಲ್ ತಲುಪಿದ ಜೊಕೊವಿಕ್

Update: 2021-07-05 17:50 GMT
PTI

ವಿಂಬಲ್ಡನ್:  ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಸೋಮವಾರ ವಿಂಬಲ್ಡನ್‌ ಚಾಂಪಿಯನ್ ಶಿಪ್ ನ ಪುರುಷರ ಸಿಂಗಲ್ಸ್ ನ ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ 17 ನೇ ಶ್ರೇಯಾಂಕದ ಕ್ರಿಸ್ಟಿಯನ್ ಗ್ಯಾರನ್‌ ರನ್ನು 6-2, 6-4, 6-2 ನೇರ ಸೆಟ್ ಗಳ ಅಂತರದಲ್ಲಿ ಸೋಲಿಸಿ ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ 50ನೇ ಬಾರಿ ಕ್ವಾರ್ಟರ್ ಫೈನಲ್ ತಲುಪಿದರು.

ಜೊಕೊವಿಕ್ ವಿಂಬಲ್ಡನ್‌ನಲ್ಲಿ 12 ನೇ ಬಾರಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು. ಈ ಮೂಲಕ ಆರ್ಥರ್ ಗೋರ್‌ ರೊಂದಿಗೆ ಪುರುಷರ ಸಾರ್ವಕಾಲಿಕ ಪಟ್ಟಿಯಲ್ಲಿ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ. ರೋಜರ್ ಫೆಡರರ್‌  18 ಹಾಗೂ  ಜಿಮ್ಮಿ ಕಾನರ್ಸ್‌ 14ನೇ ಬಾರಿ ಈ ಸಾಧನೆ ಮಾಡಿ ಮೊದಲೆರಡು ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News