ಉಜಿರೆ ಎಸ್.ಡಿ.ಎಂ. ಕಾಲೇಜಿನ ಜಾಗತಿಕ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಅಬ್ದುಲ್ಲಾ ಮಾದುಮೂಲೆ
ಬೆಳ್ತಂಗಡಿ : ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಇದರ ಜಾಗತಿಕ ಹಳೆಯ ವಿದ್ಯಾರ್ಥಿಗಳ ಸಂಘ (SDM College Ujire Global Alumni Association)ದ ಅಧ್ಯಕ್ಷರಾಗಿ ಅಬುಧಾಬಿಯ ಝಾಯೆದ್ ಫೌಂಡೇಶನ್ ನ ಸೀನಿಯರ್ ಫೈನಾನ್ಸಿಯಲ್ ಕಂಟ್ರೋಲರ್ ಅಬ್ದುಲ್ಲಾ ಮಾದುಮೂಲೆ (ಅಬುಧಾಬಿ) ಅವರನ್ನು ಆರಿಸಲಾಗಿದೆ.
ಜಾಗತಿಕ ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳ ವಿವರ
ರಕ್ಷಾಧಿಕಾರಿ: ಡಾ. ಡಿ.ವಿರೇಂದ್ರ ಹೆಗ್ಗಡೆ, ಗೌರವಾಧ್ಯಕ್ಷ: ಎಸ್.ಡಿ.ಎಂ ಶಿಕ್ಣಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ಅಧ್ಯಕ್ಷರು: ಅಬ್ದುಲ್ಲಾ ಮಾದುಮೂಲೆ, ಉಪಾಧ್ಯಕ್ಷರು: ದಿನೇಶ್ ಹೆಗ್ಡೆ ಯು.ಎಸ್.ಎ., ಪ್ರಧಾನ ಕಾರ್ಯದರ್ಶಿ : ರಾಜೇಶ್ ಬೆಂಗ್ರೋಡಿ ದುಬೈ, ಕಾರ್ಯದರ್ಶಿ: ಕಿರಣ್ ಕುಮಾರ್ ಮಲೇಷ್ಯಾ, ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿ : ಶರತ್ ಪಲಿಗಿ ಜರ್ಮನಿ, ಕೋಶಾಧಿಕಾರಿ: ರೋಶನ್ ಪಿಂಟೋ ದುಬೈ, ಮಾಧ್ಯಮ ಸಂಪರ್ಕ ಸಂಚಾಲಕರು: ಅಬ್ದುಲ್ ರಝಾಕ್ ಉಜಿರೆ (ದುಬೈ), ಕಾರ್ಯಕಾರಿ ಸದಸ್ಯರಾಗಿ ಮಹಮ್ಮದ್ ಕುತುಬುದ್ದೀನ್ ದುಬೈ, ಲಕ್ಷ್ಮಿಕಾಂತ್ ಒಮನ್, ಶ್ರುತಿ ಆಸ್ಟ್ರೇಲಿಯ ಆಯ್ಕೆಯಾಗಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಔದ್ಯೋಗಿಕ ಮಾಹಿತಿ, ತಂತ್ರಜ್ಞಾನ ಸ್ವ ಕೌಶಲ್ಯ ಅಭಿವೃದ್ಧಿ, ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ವಿವಿದೆಡೆಯಲ್ಲಿರುವ ಸಾಧಕರಾದ ಹಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ಏರ್ಪಡಿಸಿ ಜೀವನ ಮೌಲ್ಯ ನಿರ್ಣಯ ಮೊದಲಾದ ಕಾರ್ಯಗಳನ್ನು ಹಮ್ಮಿಕೊಳ್ಳಲು ಅಸೋಶಿಯೇಶನ್ ತೀರ್ಮಾನಿಸಿರುವುದಾಗಿ ಪ್ರಕಟನೆಯಲ್ಲಿ ತಿಳಿಸಿದೆ.