ರೊನಾಲ್ಡೊರೊಂದಿಗೆ ಒಪ್ಪಂದ ದೃಢಪಡಿಸಿದ ಮ್ಯಾಂಚೆಸ್ಟರ್ ಯುನೈಟೆಡ್

Update: 2021-08-27 16:37 GMT

ಲಂಡನ್: ಕ್ರಿಸ್ಟಿಯಾನೊ ರೊನಾಲ್ಡೊರನ್ನು ನಮ್ಮ ಕ್ಲಬ್ ಗೆ ವರ್ಗಾವಣೆ ಮಾಡುವುದಕ್ಕೆ ಸಂಬಂಧಿಸಿ ಜುವೆಂಟಸ್ ಫುಟ್ಬಾಲ್ ಕ್ಲಬ್ ಜೊತೆಗೆ  ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮ್ಯಾಂಚೆಸ್ಟರ್ ಯುನೈಟೆಡ್  ಅಧಿಕೃತವಾಗಿ ದೃಢಪಡಿಸಿದೆ. ಈ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದೆ.

ಒಪ್ಪಂದದ ವಿಚಾರ ತಿಳಿಸಲು ಸಂತೋಷವಾಗುತ್ತಿದೆ. ಒಪ್ಪಂದವು ವೈಯಕ್ತಿಕ ನಿಯಮಗಳು, ವೀಸಾ ಹಾಗೂ ವೈದ್ಯಕೀಯ ಒಪ್ಪಂದಕ್ಕೆ ಒಳಪಟ್ಟಿರುತ್ತದೆ ಎಂದು ಯುನೈಟೆಡ್ ತಿಳಿಸಿದೆ.

ಕ್ರಿಸ್ಟಿಯಾನೊ ಐದು ಬಾರಿ ಬ್ಯಾಲನ್ ಡಿ'ಓರ್ ವಿಜೇತರಾಗಿದ್ದಾರೆ. ಇದುವರೆಗೆ ಅವರ ವೃತ್ತಿಜೀವನದಲ್ಲಿ 30 ಪ್ರಮುಖ ಟ್ರೋಫಿಗಳನ್ನು ಗೆದ್ದಿದ್ದಾರೆ. ಇದರಲ್ಲಿ ಐದು ಯುಇಎಫ್ ಎ ಚಾಂಪಿಯನ್ಸ್ ಲೀಗ್ ಪ್ರಶಸ್ತಿಗಳು, ನಾಲ್ಕು ಫಿಫಾ ಕ್ಲಬ್ ವಿಶ್ವಕಪ್ ಗಳು, ಇಂಗ್ಲೆಂಡ್, ಸ್ಪೇನ್ ಹಾಗೂ  ಇಟಲಿಯಲ್ಲಿ  ಏಳು ಲೀಗ್ ಪ್ರಶಸ್ತಿಗಳು ಹಾಗೂ  ಸ್ಥಳೀಯ ಪೋರ್ಚುಗಲ್‌ಗಾಗಿ ಯುರೋಪಿಯನ್  ಚಾಂಪಿಯನ್‌ಶಿಪ್ ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News