ಏಷ್ಯನ್ ಯೂತ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌: ಭಾರತಕ್ಕೆ ಆರು ಚಿನ್ನದ ಪದಕ

Update: 2021-08-31 09:47 GMT
ಸ್ನೇಹ ಕುಮಾರಿ,photo: PTI

ಹೊಸದಿಲ್ಲಿ: ಏಷ್ಯನ್ ಯೂತ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಬಾಕ್ಸರ್‌ಗಳು ಮೇಲುಗೈ ಸಾಧಿಸಿದರು. ಒಂಬತ್ತು ಬೆಳ್ಳಿ ಹಾಗೂ  ಐದು ಕಂಚಿನೊಂದಿಗೆ ಆರು ಚಿನ್ನದ ಪದಕಗಳನ್ನು ಗೆದ್ದುಕೊಂಡರು. ದುಬೈನಲ್ಲಿ ಕೋವಿಡ್ -19 ಸಂಬಂಧಿತ ಪ್ರಯಾಣ ನಿರ್ಬಂಧಗಳಿಂದಾಗಿ ಮಹಿಳಾ ಸ್ಪರ್ಧೆಯು ಗಣನೀಯವಾಗಿ ಕಡಿಮೆಯಾಗಿತ್ತು.

ಪ್ರಯಾಣ ನಿರ್ಬಂಧಗಳಿಂದಾಗಿ ಹಲವಾರು ತಂಡಗಳು ಸಣ್ಣ ತಂಡಗಳನ್ನು ಕಣಕ್ಕಿಳಿಸಿದ ಕಾರಣ ಪ್ರೀತಿ ದಹಿಯಾ (60 ಕೆಜಿ), ಸ್ನೇಹ ಕುಮಾರಿ (66 ಕೆಜಿ), ಖುಷಿ (75 ಕೆಜಿ) ಹಾಗೂ  ನೇಹಾ (54 ಕೆಜಿ) ಮಹಿಳಾ ಡ್ರಾದಲ್ಲಿ ಚಿನ್ನದ ಪದಕಗಳನ್ನು ಗೆದ್ದರು. 

10 ಮಹಿಳಾ ಫೈನಲಿಸ್ಟ್‌ಗಳಲ್ಲಿಆರು ಬಾಕ್ಸರ್ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆದರು.

ಪುರುಷರ ಸ್ಪರ್ಧೆಯಲ್ಲಿ ಬಿಶ್ವಮಿತ್ರಾ ಚೊಂಗ್ಥಮ್ (51 ಕೆಜಿ) ಹಾಗೂ  ವಿಶಾಲ್ (80 ಕೆಜಿ) ಚಿನ್ನ ಗೆದ್ದರು.

ಮಹಿಳೆಯರಲ್ಲಿ ಬೆಳ್ಳಿ ಗೆದ್ದವರು: ಪ್ರೀತಿ (57 ಕೆಜಿ), ಖುಷಿ (63 ಕೆಜಿ), ತನಿಷಾ ಸಂಧು (81 ಕೆಜಿ), ನಿವೇದಿತಾ (48 ಕೆಜಿ), ತಮನ್ನಾ (50 ಕೆಜಿ) ಹಾಗೂ  ಸಿಮ್ರಾನ್ (52 ಕೆಜಿ).

ವಿಶ್ವನಾಥ ಸುರೇಶ್ (48 ಕೆಜಿ), ವಂಶಜ್ (63.5 ಕೆಜಿ) ಹಾಗೂ  ಜಯದೀಪ್ ರಾವತ್ (71 ಕೆಜಿ) ಪುರುಷರ ಸ್ಪರ್ಧೆಯಲ್ಲಿ ಬೆಳ್ಳಿ ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದರು.

ಓರ್ವ ಮಹಿಳೆ ಸೇರಿದಂತೆ ಐವರು ಭಾರತೀಯ ಬಾಕ್ಸರ್‌ಗಳು ಈ ಹಿಂದೆ ಸೆಮಿಫೈನಲ್‌ನಲ್ಲಿ ಸೋತ ನಂತರ ಕಂಚಿನ ಪದಕಗಳನ್ನು ಪಡೆದಿದ್ದರು.

ಪುರುಷರಲ್ಲಿ ದಕ್ಷ್ (67 ಕೆಜಿ), ದೀಪಕ್ (75 ಕೆಜಿ), ಅಭಿಮನ್ಯು (92 ಕೆಜಿ) ಹಾಗೂ  ಅಮನ್ ಸಿಂಗ್ ಬಿಶ್ತ್ (92+ಕೆಜಿ) ಕಂಚಿನ ಪದಕಗಳನ್ನು ಪಡೆದರೆ, ಲಶು ಯಾದವ್ (70 ಕೆಜಿ) ಮಹಿಳಾ ವಿಭಾಗದಲ್ಲಿ ಕಂಚಿ ಪದಕ ಗೆದ್ದರು.

ಮಂಗೋಲಿಯಾದ  ನಡೆದ ಏಷ್ಯನ್ ಯೂತ್ ಚಾಂಪಿಯನ್‌ಶಿಪ್‌ನ ಕೊನೆಯ ಆವೃತ್ತಿಯಲ್ಲಿ ಭಾರತವು ಐದು ಚಿನ್ನ ಸೇರಿದಂತೆ 12 ಪದಕಗಳನ್ನು ಗೆದ್ದುಕೊಂಡಿತ್ತು. .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News