ದಾರುಸ್ಸಲಾಂ ಎಜುಕೇಶನ್ ಸೆಂಟರ್ ಅಬುಧಾಬಿ ಸಮಿತಿಗೆ ಪದಾಧಿಕಾರಿಗಳ ಆಯ್ಕೆ
ಅಬುಧಾಬಿ, ಸೆ.29: ಬೆಳ್ತಂಗಡಿಯಲ್ಲಿ ಕಾರ್ಯಾಚರಿಸುತ್ತಿರುವ ದಾರುಸ್ಸಲಾಂ ಎಜುಕೇಶನ್ ಸೆಂಟರ್ ಇದರ ಪೋಷಕ ಸಂಘಟನೆಯಾದ ದಾರುಸ್ಸಲಾಂ ಎಜುಕೇಶನ್ ಸೆಂಟರ್ ಅಬುಧಾಬಿ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಇತ್ತೀಚೆಗೆ ನಡೆಯಿತು.
ಅಬುಧಾಬಿ ಇಂಡಿಯನ್ ಇಸ್ಲಾಮಿಕ್ ಸೆಂಟರ್ ನಲ್ಲಿ ನಡೆದ ವಾರ್ಷಿಕ ಮಹಾಸಭೆಯನ್ನು ಶಹೀರ್ ಹುದವಿ ಉದ್ಘಾಟಿಸಿದರು. ಯಹ್ಯಾ ಕೊಡ್ಲಿಪೇಟೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಇಬ್ರಾಹೀಂ ಅಬೂಬಕರ್ ದುಬೈ ಮಾತನಾಡಿ ಶುಭ ಹಾರೈಸಿದರು.
ಸಲಹಾ ಸಮಿತಿಯ ಪದಾಧಿಕಾರಿಗಳಾಗಿ ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್, ಹನೀಫ್ ಲಾಯಿಲ, ರಹೀಂ ಅಬೂಬಕರ್, ಮಜೀದ್ ನಾಳ, ಗೌರವಾಧ್ಯಕ್ಷರಾಗಿ ಶಹೀರ್ ಹುದವಿ, ಅಧ್ಯಕ್ಷರಾಗಿ ರಶೀದ್ ನಾಳ, ಉಪಾಧ್ಯಕ್ಷರಾಗಿ ಶರೀಫ್ ಕನ್ನಡಿಕಟ್ಟೆ, ಕಾರ್ಯಾಧ್ಯಕ್ಷರಾಗಿ ಸಿದ್ದೀಕ್ ಉಚ್ಚಿಲ, ಪ್ರಧಾನ ಕಾರ್ಯದರ್ಶಿ ಆಮಿರ್ ಚಿಕ್ಕಮಗಳೂರು, ಕಾರ್ಯದರ್ಶಿಯಾಗಿ ಶಾಫಿ ಪೆರುವಾಯಿ, ಕೋಶಾಧಿಕಾರಿಯಾಗಿ ಝಾಹಿದ್ ನಾಳ, ಸಹ ಕೋಶಾಧಿಕಾರಿಯಾಗಿ ಖಲೀಲ್ ಕಡೂರು ಆಯ್ಕೆಯಾದರು.
ಸದಸ್ಯರಾಗಿ ಯಹ್ಯಾ ಕೊಡ್ಲಿಪೇಟೆ, ಬಶೀರ್ ಹರಿಯಮೂಲೆ, ಮುಹಮ್ಮದ್ ರಿಯಾಸ್ ಹರಿಯಮೂಲೆ, ಮುಹಮ್ಮದ್ ಸಾದಿಕ್ ಬೆಳ್ತಂಗಡಿ, ಹಕೀಂ ನಾಳ, ಮುಹಮ್ಮದ್ ಇಕ್ಬಾಲ್ ಬೆಳ್ತಂಗಡಿ, ಶಬೀರ್ ಕನ್ನಡಿಕಟ್ಟೆ, ಬದ್ರುದ್ದೀನ್ ಅಬುಬಕರ್ ನೇಮಕಗೊಂಡರು.
ಶಾಫಿ ಪೆರುವಾಯಿ ಸ್ವಾಗತಿಸಿದರು. ಅಲಿ ಹೈದರ್ ಮರ್ವೇಲ್ ವಂದಿಸಿದರು.