ಜೂನಿಯರ್ ವರ್ಲ್ಡ್ ಚಾಂಪಿಯನ್‌ಶಿಪ್: ಭಾರತದ ಮಹಿಳಾ ತಂಡಕ್ಕೆ ಸ್ಕೀಟ್ ನಲ್ಲಿ ಸ್ವರ್ಣ
Update: 2021-10-02 06:59 GMT
ಹೊಸದಿಲ್ಲಿ: ಐಎಸ್‌ಎಸ್‌ಎಫ್ ಜೂನಿಯರ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಶೂಟರ್ ಗಳು ಮಹಿಳಾ ಸ್ಕೀಟ್ ಟೀಮ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ ಪುರುಷರ ಟೀಮ್ ಫೈನಲ್ ನಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡರು.
ಅರೀಬಾ ಖಾನ್, ರೈಝಾ ಧಿಲ್ಲೋನ್ ಹಾಗೂ ಗನೇಮತ್ ಸೆಖೋನ್ ಒಟ್ಟು 6 ಅಂಕಗಳನ್ನು ಗಳಿಸಿದ ನಂತರ ಮಹಿಳಾ ಸ್ಪರ್ಧೆಯಲ್ಲಿ ಅಗ್ರಸ್ಥಾನ ಪಡೆದರು.
ಶುಕ್ರವಾರ ನಡೆದ ಚಿನ್ನದ ಪದಕದ ಸುತ್ತಿನಲ್ಲಿ ಭಾರತೀಯ ಮಹಿಳೆಯರು ಇಟಾಲಿಯನ್ ತಂಡದ ಡಾಮಿಯಾನಾ ಪಾವೊಲಾಸಿ, ಸಾರಾ ಬೊಂಗಿನಿ ಹಾಗೂ ಗಿಯಾಡಾ ಲೋಂಘಿ ವಿರುದ್ಧ ಸೆಣಸಿದರು.
ರಾಜ್‌ವೀರ್ ಗಿಲ್, ಆಯುಷ್ ರುದ್ರರಾಜು ಹಾಗೂ ಅಭಯ್ ಸಿಂಗ್ ಸೆಖೋನ್ ಅವರನ್ನೊಳಗೊಂಡ ಭಾರತೀಯ ತಂಡವು ಪುರುಷರ ವಿಭಾಗದಲ್ಲಿ ಟರ್ಕಿಯ ಶೂಟರ್ ಗಳ ವಿರುದ್ಧ 6-0 ಅಂತರದಲ್ಲಿ ಜಯ ಸಾಧಿಸಿ ಕಂಚಿನ ಪದಕ ಗೆದ್ದಿತು,