ಯುಎಇಯಲ್ಲಿ ಏರ್ ಆಂಬ್ಯುಲೆನ್ಸ್ ಪತನ: ನಾಲ್ವರು ಮೃತ್ಯು
Update: 2021-10-02 10:06 GMT
ದುಬೈ: ಎಮಿರೇಟ್ ಪೊಲೀಸರು ಹಾರಾಟ ನಡೆಸುತ್ತಿದ್ದ ಅಬುಧಾಬಿ ಏರ್ ಆಂಬ್ಯುಲೆನ್ಸ್ ಶನಿವಾರ ಪತನಗೊಂಡಿದ್ದು, ನಾಲ್ವರು ಮೃತಪಟ್ಟಿದ್ದಾರೆ ಎಂದು ಅಬುಧಾಬಿ ಪೊಲೀಸರು ತಿಳಿಸಿದ್ದಾರೆ.
ಪತನಗೊಂಡ ಸ್ಥಳ ಅಥವಾ ಪತನಕ್ಕೆ ಕಾರಣ ಏನೆಂಬ ಬಗ್ಗೆ ಯಾವುದೇ ವಿವರಗಳನ್ನು ಅಬುಧಾಬಿ ಪೊಲೀಸರು ನೀಡಿಲ್ಲ.
ಮೃತರಲ್ಲಿ ಇಬ್ಬರು ಪೈಲಟ್‌ಗಳು, ಒಬ್ಬ ನಾಗರಿಕ ವೈದ್ಯರು ಹಾಗೂ ನರ್ಸ್ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.