ಸರಕಾರದ ಉಪಕ್ರಮಗಳ ಸುಧಾರಣೆಗೆ ನೆರವಾಗಲು ಅನುದಾನ ನಿಧಿ ಆರಂಭಿಸಿದ ಯುಎಇ

Update: 2021-10-06 17:16 GMT

ವಾಷಿಂಗ್ಟನ್, ಅ.6: ಸಾರ್ವಜನಿಕ ಕ್ಷೇತ್ರದ ಉಪಕ್ರಮಗಳ ಸುಧಾರಣೆಗೆ ನವೀನ ಪರಿಕಲ್ಪನೆ ಹಾಗೂ ಯೋಜನೆಗಳನ್ನು ಅಭಿವೃದ್ಧಿಗೊಳಿಸಿ ಅನುಷ್ಟಾನ ಮಾಡುವ ನಿಟ್ಟಿನಲ್ಲಿ ಮತ್ತು ಭವಿಷ್ಯಕ್ಕಾಗಿ ದೇಶದ ಸಿದ್ಧತೆಗಳನ್ನು ಹೆಚ್ಚಿಸಲು ನೂತನ ಅನುದಾನ ನಿಧಿಯನ್ನು ಯುಎಇ ಸರಕಾರ ಸ್ಥಾಪಿಸಿದೆ.

ಮೂನ್ಶಾಟ್ ಪೈಲಟ್ ಗ್ರ್ಯಾಂಟ್ ಎಂಬ ಹೆಸರಿನ ಈ ನಿಧಿಗೆ ಮುಹಮ್ಮದ್ ಬಿನ್ ರಶೀದ್ ಸೆಂಟರ್ ಫಾರ್ ಗವರ್ನ್ಮೆಂಟ್ ಇನೊವೇಶನ್ನ ಮೂನ್ಶಾಟ್ ಅಪ್ರೆಂಟಿಸ್ಶಿಪ್ ಕಾರ್ಯಕ್ರಮದ ಪದವಿಪ್ರದಾನ ಸಮಾರಂಭದಲ್ಲಿ ಚಾಲನೆ ನೀಡಲಾಗಿದೆ.

ಯುಎಇಯ ಯುವಜನ ಮತ್ತು ಸಂಸ್ಕತಿ ಖಾತೆ ಸಚಿವ ನೌರಾ ಬಿನ್ ಮುಹಮ್ಮದ್ ಅಲ್ಕಾಬಿ, ಆರ್ಥಿಕ ಸಚಿವ ಅಬ್ದುಲ್ಲಾ ಬಿನ್ ತೌಖ್ ಅಲ್ ಮರ್ರಿ, ಉದ್ಯಮಶೀಲತೆ, ಸಣ್ಣ ಮತ್ತು ಮಧ್ಯಮ ಉದ್ಯಮ ಇಲಾಖೆಯ ಸಹಾಯಕ ಸಚಿವ ಡಾ. ಅಹ್ಮದ್ ಬಿನ್ ಅಬ್ದುಲ್ಲಾ ಹುಮೈದ್ ಅಲ್ ಫಲಾಸಿ, ವಿದೇಶ ವ್ಯಾಪಾರ ಇಲಾಖೆಯ ಸಹಾಯಕ ಸಚಿವ ಡಾ. ಥನಿ ಬಿನ್ ಅಹ್ಮದ್ ಅಲ್ ಝೆಯೋದಿ, ಸರಕಾರ ಅಭಿವೃದ್ಧಿ ಮತ್ತು ಭವಿಷ್ಯ(ಫ್ಯೂಚರ್) ಇಲಾಖೆಯ ಸಹಾಯಕ ಸಚಿವ ಒಹೂದ್ ಬಿನ್ ಖಲ್ಫಾನ್ ಅಲ್ ರೌಮಿ, ಮುಂದುವರಿದ ತಂತ್ರಜ್ಞಾನ ಇಲಾಖೆಯ ಸಹಾಯಕ ಸಚಿವರಾದ ಸಾರಾ ಬಿನ್ ಯೂಸುಫ್ ಅಲ್ಅಮೀರಿ, ಕೃತಕ ಬುದ್ಧಿಮತ್ತೆ ಇಲಾಖೆಯ ಸಹಾಯಕ ಸಚಿವ ಉಮರ್ ಸುಲ್ತಾನ್ ಅಲ್ ಉಲಾಮ ಮುಂತಾದ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಾರ್ವಜನಿಕ ಕ್ಷೇತ್ರದ ಉಪಕ್ರಮಗಳ ಸುಧಾರಣೆಗೆ ನವೀನ ಪರಿಕಲ್ಪನೆ ಹಾಗೂ ಯೋಜನೆಗಳಿಗೆ ವೇಗ ನೀಡುವ ಉದ್ದೇಶದ ಪ್ರತೀ ನವೀನ ಪರಿಕಲ್ಪನೆಗೆ ಸರಕಾರ 1 ಲಕ್ಷ ಡಾಲರ್ ಅನುದಾನ ಒದಗಿಸಲಿದೆ . ಅಂಕಿಅಂಶ, ತಂತ್ರಜ್ಞಾನ, ಜಾಗತಿಕ ಕೌಶಲ್ಯ ಮುಂತಾದ ಸರಕಾರಿ ಕ್ಷೇತ್ರಗಳಿಗೆ ಸಂಬಂಧಿಸಿದ ಯೋಜನೆಗಳಿಗೆ ಅನುದಾನ ಒದಗಿಸಲಾಗುವುದು. ಆಸಕ್ತರು https://gic.mbrcgi.gov.ae/ ವೆಬ್ಸೈಟ್ ಗೆ  ತಮ್ಮ ಪರಿಕಲ್ಪನೆ ಮತ್ತು ಯೋಜನೆಯ ವಿವರವನ್ನು ಅಪ್ಲೋಡ್ ಮಾಡಬಹುದು ಎಂದು ತಿಳಿಸಲಾಗಿದೆ.
ಅರ್ಜಿದಾರರು ಆಡಳಿತದ ಸಾರವನ್ನು ಬದಲಾಯಿಸುವ ಮತ್ತು ಸರಕಾರಕ್ಕೆ ನೆರವಾಗುವ ಹೊಸಶೋಧಗಳ ಘಟಕಗಳನ್ನು ರೂಪಿಸಲು ಪೂರಕವಾದ ಸದೃಢ ಕ್ರಿಯೆಗಳನ್ನು ಪ್ರಸ್ತುತಪಡಿಸಬೇಕು. ಪರಿಕಲ್ಪನೆಗಳು ಪ್ರಭಾವಶಾಲಿಯಾಗಿರಬೇಕು ಮತ್ತು ಸರಕಾರದ ಯೋಜನೆಗಳನ್ನು ಸಕಾಲದಲ್ಲಿ ಮತ್ತು ಸುಧಾರಿತ ರೀತಿಯಲ್ಲಿ ಪೂರ್ಣಗೊಳಿಸಲು ಸಮಥವಾರ್ಗಿರಬೇಕು ಎಂದು ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News