ಎಂಪಿಸಿ-ತುಂಬೆ ಫಾರ್ಮಸಿ ಒಪ್ಪಂದ
ದುಬೈ, ಅ. 18: ಅಲ್ಬತಾ ಸಮೂಹದ ಭಾಗವಾಗಿರುವ ಯುಎಇ ಮೂಲದ ಎಂಪಿಸಿ (ಮಾಡರ್ನ್ ಫಾರ್ಮಾಸ್ಯೂಟಿಕಲ್ ಎಲ್‌ಎಲ್‌ಸಿ) ತುಂಬೆ ಸಮೂಹದ ಭಾಗವಾಗಿರುವ ತುಂಬೆ ಫಾರ್ಮಸಿಯೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿದೆ. ಈ ಒಪ್ಪಂದದಂತೆ ತುಂಬೆ ಫಾರ್ಮಸಿಯ ಎಲ್ಲ ವ್ಯವಹಾರಗಳ ನಿರ್ವಹಣೆಯನ್ನು ಎಂಪಿಸಿ ಕೈಗೆತ್ತಿಕೊಳ್ಳಲಿದೆ.
ಮಾರುಕಟ್ಟೆಯಲ್ಲಿ 50 ವರ್ಷಗಳ ಯಶಸ್ವಿ ದಾಖಲೆಯನ್ನು ಹೊಂದಿರುವ ಎಂಪಿಸಿ ಆರೋಗ್ಯ ಸೇವೆಗಳ ಪ್ರಮುಖ ವಿತರಕ. ಫಾರ್ಮಾ, ಆರೋಗ್ಯ ಹಾಗೂ ಬಳಕೆದಾರರ ಸೇವೆಯಲ್ಲಿ ಈ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸುತ್ತಿದೆ.
ಯುಎಇ ಹಾಗೂ ಭಾರತದಲ್ಲಿ ಆಸ್ಪತ್ರೆಗಳು, ಕ್ಲಿನಿಕ್‌ಗಳು, ಫಾರ್ಮಸಿಗಳು ಸೇರಿದಂತೆ 20 ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿ ರುವ ವೈವಿದ್ಯಮಯ ಉದ್ಯಮ ಸಮೂಹ ತುಂಬೆ ಸಮೂಹ.
ಆರೋಗ್ಯ ಕ್ಷೇತ್ರದ ಈ ಎರಡು ಪ್ರಮುಖ ಸಂಸ್ಥೆಗಳು ಫಾರ್ಮಸಿ ಉದ್ಯಮದಲ್ಲಿ ಜಂಟಿಯಾಗಿ ಕಾರ್ಯ ನಿರ್ವಹಿಸಲು, ತುಂಬೆ ಫಾರ್ಮಸಿಯ ಎಲ್ಲ ಕಾರ್ಯಾಚರಣೆಯ ನಿಯಂತ್ರಣವನ್ನು ಎಂಪಿಸಿ ಕೈಗೆತ್ತಿಕೊಳ್ಳಲು ಒಪ್ಪಂದ ಮಾಡಿಕೊಂಡಿವೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.