ಬಿಡಬ್ಲ್ಯುಎಫ್ ನಿಂದ 'ಬಪ್ಪ ಬ್ಯಾರಿ' ಪಾತ್ರಧಾರಿ ಖ್ಯಾತಿಯ ರಾಧಾಕೃಷ್ಣ ನಾವಡರಿಗೆ ಸನ್ಮಾನ
ಅಬುಧಾಬಿ, ಅ.24: ಬ್ಯಾರೀಸ್ ವೆಲ್ಫೇರ್ ಫೋರಂ(ಬಿಡಬ್ಲ್ಯುಎಫ್), ಅಬು ಧಾಬಿ ಇದರ ವತಿಯಿಂದ ಖ್ಯಾತ ಯಕ್ಷಗಾನ ಪಾತ್ರಧಾರಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಸದಸ್ಯ ರಾಧಾಕೃಷ್ಣ ನಾವಡರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಅಬುಧಾಬಿಯ ಇಂಡಿಯನ್ ಇಸ್ಲಾಮಿಕ್ ಸೆಂಟರ್ ನಲ್ಲಿ ಜರುಗಿದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿಡಬ್ಲ್ಯುಎಫ್ ಅಧ್ಯಕ್ಷ ಮುಹಮ್ಮದಲಿ ಉಚ್ಚಿಲ್ ಮಾತನಾಡಿ ನಾವಡರ ಪರಿಚಯ ಮಾಡಿದರು. ಇದೇವೇಳೆ ನಾವಡರನ್ನು ಬಿಡಬ್ಲ್ಯುಎಫ್ ಪದಾಧಿಕಾರಿಗಳು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಾವಡ ತಮ್ಮ ವೃತ್ತಿ ಜೀವನ ಮತ್ತು ಬಪ್ಪ ಬ್ಯಾರಿಯ ಕುರಿತಾಗಿ ಮಾತನಾಡಿದರು.
ಹಮೀದ್ ಗುರುಪುರ, ಬಶೀರ್ ಬಜ್ಪೆ, ಮುಹಮ್ಮದ್ ಕಲ್ಲಾಪು, ಇಮ್ರಾನ್ ಅಹ್ಮದ್, ಹನೀಫ್ ಉಳ್ಳಾಲ್, ಅಬ್ದುಲ್ ಮಜೀದ್, ಬಶೀರ್ ಉಚ್ಚಿಲ್, ನವಾಝ್ ಅಹ್ಮದ್, ಇರ್ಫಾನ್ ಅಹ್ಮದ್, ಮುಜೀಬ್ ಉಚ್ಚಿಲ್, ಜಲೀಲ್ ಬಜ್ಪೆ, ಮಜೀದ್ ಆತೂರು ಮತ್ತು ವಿನಾಯಕ ನಾವಡ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಮದುಮೂಲೆ ಸ್ವಾಗತಿಸಿದರು. ಮುಹಮ್ಮದ್ ಸಿದ್ದೀಕ್ ಕಾಪು ವಂದಿಸಿದರು.