ಇಂದು 3 ಲೋಕಸಭೆ, 29 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ

Update: 2021-10-30 05:08 GMT

ಹೊಸದಿಲ್ಲಿ: 13 ರಾಜ್ಯಗಳಾದ್ಯಂತ ಮತ್ತು ದಾದ್ರಾ -ನಗರ ಹವೇಲಿಯ ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಮೂರು ಲೋಕಸಭೆ ಹಾಗೂ  29 ವಿಧಾನಸಭಾ ಸ್ಥಾನಗಳಿಗೆ  ಇಂದು ಉಪಚುನಾವಣೆ ನಡೆಯುತ್ತಿದೆ. ಹಾಲಿ ಶಾಸಕರು ಪಕ್ಷಾಂತರ ಮಾಡಿ ಬಿಜೆಪಿ ಸೇರಿದ ನಂತರ ಬಹುತೇಕ ಎಲ್ಲಾ ವಿಧಾನಸಭಾ ಉಪಚುನಾವಣೆಗಳು ನಡೆಯಬೇಕಾಗಿದೆ. ಮಂಗಳವಾರ ಮತ ಎಣಿಕೆ ನಡೆಯಲಿದೆ.

ಹಿಮಾಚಲ ಪ್ರದೇಶ (ಮಂಡಿ), ಮಧ್ಯಪ್ರದೇಶ (ಖಾಂಡ್ವಾ) ಹಾಗೂ  ದಾದ್ರಾ ಮತ್ತು ನಗರ ಹವೇಲಿಯಲ್ಲಿ ಮೂರು ಲೋಕಸಭಾ ಉಪಚುನಾವಣೆಗಳು ನಡೆಯುತ್ತಿವೆ. ಸಂಸದರ ನಿಧನದ ನಂತರ ಈ ಮೂರೂ ಸ್ಥಾನಗಳು ಖಾಲಿ ಇವೆ. ಮಂಡಿ ಸಂಸದ ರಾಮಸ್ವರೂಪ್ ಶರ್ಮಾ ಮತ್ತು ಖಾಂಡ್ವಾ ಸಂಸದ ನಂದಕುಮಾರ್ ಸಿಂಗ್ ಚೌಹಾಣ್ ಮಾರ್ಚ್‌ನಲ್ಲಿ ನಿಧನರಾದರು. 

ದಾದ್ರಾ ಸಂಸದ ಮೋಹನ್ ದೇಲ್ಕರ್ ಅವರು ಒಂದು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡರು. ಮಂಡಿ ಮತ್ತು ಖಾಂಡ್ವಾವನ್ನು ಬಿಜೆಪಿ ಇತರ ಪ್ರತಿನಿಧಿಸುತ್ತಿದ್ದರೆ, ದೇಲ್ಕರ್ ಸ್ವತಂತ್ರ ಸಂಸದರಾಗಿದ್ದರು.

ಉಪಚುನಾವಣೆಗಳಲ್ಲಿ ಕರ್ನಾಟಕದ ಹಾನಗಲ್ ಹಾಗೂ  ಸಿಂದಗಿ ಕ್ಷೇತ್ರಗಳು ಸೇರಿವೆ. ಜುಲೈನಲ್ಲಿ ಬಿಎಸ್ ಯಡಿಯೂರಪ್ಪ ಅವರ ಬದಲಿಗೆ ಆಯ್ಕೆಯಾಗಿರುವ  ನೂತನ ಬಿಜೆಪಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇದು ಮೊದಲ ಚುನಾವಣಾ ಪರೀಕ್ಷೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News