ಖತರ್ ಇಂಡಿಯನ್ ಸೋಶಿಯಲ್ ಫೋರಂ ಕೇಂದ್ರ ಸಮಿತಿಗೆ ಪದಾಧಿಕಾರಿಗಳ ಆಯ್ಕೆ
ದೋಹ, ಅ.31: ಖತರ್ ಇಂಡಿಯನ್ ಸೋಶಿಯಲ್ ಫೋರಂ(ಕ್ಯೂಐಎಸ್ ಎಫ್)ನ ಕೇಂದ್ರ ಸಮಿತಿಗೆ ಮುಂದಿನ ಮೂರು ವರ್ಷದ ಅವಧಿಗೆ ಪದಾಧಿಕಾರಿಗಳ ಆಯ್ಕೆ ಚುನಾವಣೆ ಇತ್ತೀಚೆಗೆ ನಡೆಯಿತು.
ಕೇಂದ್ರ ಸಮಿತಿಯ ನೂತನ ಅಧ್ಯಕ್ಷರಾಗಿ ಅಯ್ಯೂಬ್ ಉಳ್ಳಾಲ (ಕರ್ನಾಟಕ), ಉಪಾಧ್ಯಕ್ಷರಾಗಿ ಸಲಾಂ ಕುನ್ನಮ್ಮಲ್ (ಕೇರಳ), ಪ್ರಧಾನ ಕಾರ್ಯದರ್ಶಿಯಾಗಿ ಸಯೀದ್ ಕೋಮಾಚಿ (ಕೇರಳ) ಚುನಾಯಿತರಾದರು.
ಕಾರ್ಯದರ್ಶಿಗಳಾಗಿ ಉಸ್ಮಾನ್ ಮುಹಮ್ಮದ್ (ತಮಿಳ್ನಾಡು) ಮತ್ತು ಒಸಾಮಾ ಅಹ್ಮದ್ (ಕೇರಳ) ಚುನಾಯಿತರಾದರು.
ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶಾಕಿರ್ ಪುಂಜಾಲಕಟ್ಟೆ (ಕರ್ನಾಟಕ), ಮುಹಮ್ಮದ್ ಅಲಿ (ಕೇರಳ), ಬಶೀರ್ ಅಹ್ಮದ್ (ತಮಿಳುನಾಡು), ವಸೀಮ್ ಅಕ್ರಮ್ (ಬಿಹಾರ್), ಜಮಾಲ್ ಸರ್ವರ್ (ಝಾರ್ಖಂಡ್), ಟಿ.ವಿ.ರಝಾಕ್ (ಕೇರಳ), ಮುಹಿಯುದ್ದೀನ್ (ತಮಿಳುನಾಡು) ಹಾಗೂ ಫೈಝಾನ್ ಅಹ್ಮದ್ (ಮಹಾರಾಷ್ಟ್ರ) ಚುನಾಯಿತರಾದರು.
ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಅಬ್ಬಾಸ್ ರವರು ಫೈಸಲ್ ರವರ ಸಹಯೋಗದೊಂದಿಗೆ ನಿರ್ವಹಿಸಿದರು.
ಅಧ್ಯಕ್ಷರಾಗಿ ಚುನಾಯಿತರಾದ ಅಯ್ಯೂಬ್ ಉಳ್ಳಾಲ ಮಾತನಾಡಿ, ನೂತನ ಪದಾಧಿಕಾರಗಳು ತಮ್ಮ ಸಮಯವನ್ನು ಸಮಾಜ ಸೇವೆಗಾಗಿ ಮೀಸಲಿಟ್ಟು, ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
2021-2024ರ ಸಾಲಿಗೆ ಚುನಾಯಿತಗೊಂಡ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ರಾಜ್ಯ ಪದಾಧಿಕಾರಿಗಳು, ಹಾಗೂ ಕೇಂದ್ರ ಸಮಿತಿಯ ನಿರ್ಗಮನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉಸ್ಮಾನ್ ಮುಹಮ್ಮದ್ ಕಾರ್ಯಕ್ರಮ ನಿರೂಪಿಸಿದರು.